ಕಾಶ್ಮೀರಿಗಳಿಗೆ ಕಿರುಕುಳ ನೀಡಿದರೆ ಉಗ್ರರ ಉದ್ದೇಶ ಈಡೇರಿದಂತೆ: ಒಮರ್ ಅಬ್ದುಲ್ಲಾ

Update: 2019-02-17 15:42 GMT

ಶ್ರೀನಗರ,ಫೆ.17: ಕಾಶ್ಮೀರ ಎಂದರೆ ಕೇವಲ ಒಂದು ಭೂಮಿಯ ತುಂಡು ಮಾತ್ರವಲ್ಲ, ಅದರಲ್ಲಿ ವಾಸಿಸುವ ಜನರೂ ಸೇರಿದ್ದಾರೆ ಎಂದು ಪ್ರತಿಪಾದಿಸಿರುವ ನ್ಯಾಶನಲ್ ಕಾನ್ಫರೆನ್ಸ್‌ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು, ‘‘ಕಾಶ್ಮೀರಿಗಳ ಮೇಲೆ ದಾಳಿ ನಡೆಸುವ ಮೂಲಕ ಅವರಿಗೆ ಕಣಿವೆಯ ಹೊರಗೆ ಸ್ಥಳವಿಲ್ಲ ಹಾಗೂ ಭಾರತದ ಮುಖ್ಯಭೂಮಿಯಲ್ಲಿ ಅವರಿಗೆ ಭವಿಷ್ಯವಿಲ್ಲ’’ ಎಂಬ ಸಂದೇಶವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜಮ್ಮುಕಾಶ್ಮೀರದ ಹೊರಗೆ ಅಧ್ಯಯನ ನಡೆಸುತ್ತಿರುವ ಯುವ ಕಾಶ್ಮೀರಿ ವಿದ್ಯಾರ್ಥಿಗಳು ಕಾಶ್ಮೀರದ ರಾಜಕೀಯ ಹಾಗೂ ಸಂಘರ್ಷಗಳಿಂದ ದೂರವಿದ್ದು, ಅದರ ಬದಲಿಗೆ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಬಯಸಿದ್ದಾರೆ. ಅವರ ಮೇಲೆ ದಾಳಿ ನಡೆಸುವ ಮೂಲಕ, ಅವರಿಗೆ ಕಣಿವೆಯ ಹೊರಗೆ ಹಾಗೂ ಭಾರತದ ಮುಖ್ಯ ಭೂಮಿಯಲ್ಲಿ ಯಾವುದೇ ಭವಿಷ್ಯವಿಲ್ಲವೆಂಬ ಸಂದೇಶ ನೀಡಲಾಗುತ್ತಿದೆ ಎಂದರು.

ಜಮ್ಮುವಿನಲ್ಲಿ ಕಾಶ್ಮೀರಿಗಳ ಮೇಲೆ ದಾಳಿ ನಡೆದಿರುವ ಹಾಗೂ ರಾಜ್ಯದ ಹೊರಗಿನ ಕೆಲವು ಸ್ಥಳಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ವರದಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಶತ್ರುವು ಕಾಶ್ಮೀರ ಕಣಿವೆಯ ಜನತೆ ಹಾಗೂ ದೇಶದ ಇತರ ಭಾಗದ ಜನರ ನಡುವೆ ಒಡಕನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಒಮರ್ ಆರೋಪಿಸಿದರು. ಕಾಶ್ಮೀರಿಗಳ ಮೇಲೆ ದೌರ್ಜನ್ಯ ಎಸಗುವುದರಿಂದ, ಶತ್ರುವಿನ ಉದ್ದೇಶ ಈಡೇರಿದಂತಾಗುತ್ತದೆ. ಕಾಶ್ಮೀರವೆಂಬುದು ಕೇವಲ ಒಂದು ಒಂದು ತುಂಡು ಭೂಮಿಯಲ್ಲ, ಅಲ್ಲಿ ವಾಸವಾಗಿರುವ ಜನರೂ ಆಗಿದ್ದಾರೆ’’ ಎಂದು ಉಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News