ಅರ್ಜೆಂಟೀನ ಓಪನ್ ಟೆನಿಸ್: ಸ್ವಾರ್ಟ್ಝ್‌ಮನ್ ಫೈನಲ್‌ಗೆ

Update: 2019-02-17 18:22 GMT

ಬ್ಯೂನಸ್ ಐರಿಸ್, ಫೆ.17: ತವರಿನ ಪ್ರೇಕ್ಷಕರ ಬೆಂಬಲ ಪಡೆದ ಅರ್ಜೆಂಟೀನದ ಡಿಯಾಗೊ ಸ್ವಾರ್ಟ್ಝ್‌ಮನ್ ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್‌ಗೆ ಮಣ್ಣ್ಣುಮುಕ್ಕಿಸಿ ಶನಿವಾರ ರಾತ್ರಿ ಅರ್ಜೆಂಟೀನ ಓಪನ್‌ನ ಫೈನಲ್ ಪ್ರವೇಶಿಸಿದ್ದಾರೆ.

ಆರಂಭದ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದ್ದ ಸ್ವಾರ್ಟ್ಝ್‌ಮನ್ ಪುಟಿದೆದ್ದು ಟೈಬ್ರೇಕರ್‌ವರೆಗೆ ಸಾಗಿದ ಪಂದ್ಯದಲ್ಲಿ 2-6, 6-4, 7-6(5) ಸೆಟ್‌ಗಳಿಂದ ವಿಜಯ ಸಾಧಿಸಿ ಫೈನಲ್‌ಗೆ ಕಾಲಿಟ್ಟರು. ಪಂದ್ಯ ಸುಮಾರು 2 ಗಂಟೆಗಳ ಕಾಲ ನಡೆಯಿತು.

ಬ್ಯೂನಸ್ ಐರಿಸ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ ಮೊದಲ ಬಾರಿ ಸೋಲು ಕಂಡಿದ್ದಾರೆ ಅಗ್ರಶ್ರೇಯಾಂಕದ ಥೀಮ್. ಫೈನಲ್ ಪಂದ್ಯದಲ್ಲಿ ಸ್ವಾರ್ಟ್ಝ್‌ಮನ್ ಇಟಲಿಯ ಮಾರ್ಕೊ ಸೆಚಿನ್ಯಾಟೊ ಅವರ ಸವಾಲಿಗೆ ಸಜ್ಜಾಗಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಸೆಚಿನ್ಯಾಟೊ ಅರ್ಜೆಂಟೀನದ ಗೈಡೊ ಪೆಲ್ಲಾ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News