ಪುಲ್ವಾಮಾ ದಾಳಿ ಬಳಿಕ ಸೇನೆಯ 111 ಹುದ್ದೆಗೆ 2,500 ಕಾಶ್ಮೀರಿ ಯುವಕರ ಅರ್ಜಿ

Update: 2019-02-19 18:18 GMT

ಶ್ರೀನಗರ,ಫೆ.19: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ವಾಹನದ ಮೇಲೆ ಭಯೋತ್ಪಾದಕ ದಾಳಿಯು ನಡೆದು ಇನ್ನೂ ಒಂದು ವಾರವಾಗಿಲ್ಲ,ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನೆಯಲ್ಲಿನ 111 ಖಾಲಿ ಹುದ್ದೆಗಳಿಗೆ ನೇಮಕಕ್ಕಾಗಿ ನಡೆದ ರ್ಯಾಲಿಯಲ್ಲಿ ಕಾಶ್ಮೀರದ ಕನಿಷ್ಠ 2,500 ಯುವಕರು ಪಾಲ್ಗೊಂಡಿದ್ದರು.

ನಿರುದ್ಯೋಗ ಸಮಸ್ಯೆಯು ಕಾಡುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ರ್ಯಾಲಿಗಳಲ್ಲಿ ಸಾವಿರಾರು ಪುರುಷರು ಭಾಗಿಯಾಗುವುದು ಸಾಮಾನ್ಯವಾಗಿದ್ದರೂ,111 ಹುದ್ದೆಗಳಿಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದು ಇಲ್ಲಿಯ ಯುವಕರಿಗೆ ಗೌರವಯುತ ಜೀವನೋಪಾಯ ಮತ್ತು ರಾಷ್ಟ್ರಸೇವೆಯ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಉತ್ತೇಜನವಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಸೇನೆಯನ್ನು ಸೇರುವ ಮೂಲಕ ನಾವು ದೇಶಕ್ಕೆ ಸೇವೆಯನ್ನು ಸಲ್ಲಿಸಬಹುದು ಮತ್ತು ಕಾಶ್ಮೀರ ಕಣಿವೆಯಲ್ಲಿ ನಮಗೆ ಉದ್ಯೋಗಾವಕಾಶಗಳು ಕಠಿಣವಾಗಿರುವುದರಿಂದ ನಮ್ಮ ಕುಟುಂಬಗಳ ಕಾಳಜಿ ವಹಿಸಬಹುದು ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಯೋರ್ವ ತಿಳಿಸಿದ.

ನಾವು ಕಾಶ್ಮೀರದಿಂದ ಹೊರಕ್ಕೆೆ ಹೋಗಲು ಸಾಧ್ಯವಿಲ್ಲ. ಇದು ನಮಗೆ ಬೃಹತ್ ಅವಕಾಶವಾಗಿದೆ. ನಮಗೆ ಹೆಚ್ಚಿನ ಹುದ್ದೆಗಳನ್ನು ನೀಡಬೇಕು ಎಂದು ನಾವು ಬಯಸುತ್ತೇವೆ. ಕಾಶ್ಮೀರಿ ಸಿಬ್ಬಂದಿಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿದರೆ ಅವರು ಜನರೊಂದಿಗೆ ಮಾತುಕತೆ ನಡೆಸುತ್ತಾರೆ ಮತ್ತು ಹಾಲಿ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುತ್ತಾರೆ ಎಂದು ಇನ್ನೋರ್ವ ಅಭ್ಯರ್ಥಿ ತಿಳಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News