ನಿರೀಕ್ಷಣಾ ಜಾಮೀನು ರದ್ದಿಗೆ ಆಗ್ರಹಿಸಲು ಕಾರಣ ನೀಡಿ: ಹೈಕೋರ್ಟ್

Update: 2019-02-21 18:00 GMT

ಹೊಸದಿಲ್ಲಿ, ಫೆ. 21: ಅತ್ಯಾಚಾರ ಪ್ರಕರಣದಲ್ಲಿ ಸ್ಪಘೋಷಿತ ದೇವ ಮಾನವ ದಾತಿ ಮಹಾರಾಜ್‌ಗೆ ನೀಡಿದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಲು ಕಾರಣವೇನು ಎಂಬುದನ್ನು ವಿವರಿಸುವಂತೆ ದಿಲ್ಲಿ ಹೈಕೋರ್ಟ್ ಗುರುವಾರ ಸಿಬಿಐಗೆ ಸೂಚಿಸಿದೆ.

2018 ಅಕ್ಟೋಬರ್‌ನಲ್ಲಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದರಿಂದ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಕೈಗೊಂಡ ಕ್ರಮಗಳನ್ನು ಬಗ್ಗೆ ಹೈಕೋರ್ಟ್ ಸಿಬಿಐಯನ್ನು ಪ್ರಶ್ನಿಸಿತು.

ದಾತಿ ಹಾಗೂ ಇತರ ಮೂವರಿಗೆ ವಿಚಾರಣಾ ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಸಿಬಿಐ ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ಈ ವರ್ಷ ಜನವರಿಯಲ್ಲಿ ವಿಚಾರಣೆ ನಡೆಸಿತ್ತು.

‘‘ನೀವು ಎಲ್ಲಿ ಹೇಳಿದ್ದೀರಿ ? ಕಸ್ಟಡಿ ವಿಚಾರಣೆಯ ಅಗತ್ಯತೆ ಏನಿದೆ ? ಇದರಲ್ಲಿ ಏನೂ ಇಲ್ಲ’’ ಎಂದು ನ್ಯಾಯಮೂರ್ತಿ ಚಂದರ್ ಶೇಖರ್ ಸಿಬಿಐಯಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲರು, ಅಪರಾಧ ರಾಜಸ್ಥಾನದಲ್ಲಿ ನಡೆದಿದೆ. ದಿಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ. ಅನಂತರ ಅದನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News