ತೇಜಸ್ ವಿಮಾನದಲ್ಲಿ ಹಾರಿದ ಪಿ.ವಿ. ಸಿಂಧು

Update: 2019-02-23 09:50 GMT

ಬೆಂಗಳೂರು, ಫೆ.23: ಯಲಹಂಕದ ವಾಯುನೆಲೆಯಲ್ಲಿ   ನಡೆಯುತ್ತಿರುವ ಏರೋ ಇಂಡಿಯಾ ಶೋ  2019  ನಾಲ್ಕನೇ ದಿನ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಎಚ್ ಎಎಲ್ ನ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಡುವ ಮೂಲಕ ನೂತನ ದಾಖಲೆ ನಿರ್ಮಿಸಿದರು.

ತೇಜಸ್ ವಿಮಾನದಲ್ಲಿ ಸಿಂಧು ಕೋ ಪೈಲೆಟ್ ಸೀಟ್ ನಲ್ಲಿ ಕುಳಿತು 15 ನಿಮಿಷಗಳ ಕಾಲ ಹಾರಾಟದಲ್ಲಿ ಪಾಲ್ಗೊಂಡರು.  ಸಿಂಧು  ಅವರು ತೇಜಸ್ ವಿಮಾನದಿಂದ ಕೆಳಗಿಳಿದ ಸ್ವಲ್ಪ ಹೊತ್ತಿನಲ್ಲಿ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು 300ಕ್ಕೂ ಅಧಿಕ ಐಶಾರಾಮಿ ಕಾರುಗಳು ಬೆಂಕಿಯಿಂದ ಸುಟ್ಟು ಕರಕಲಾಗಿದೆ. ಇದರಿಂದಾಗಿ ಏರ್ ಶೋ ಸ್ವಲ್ಪ ಹೊತ್ತು ಸ್ಥಗಿತಗೊಂಡಿತು.

ಈ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News