×
Ad

ಸಿಟ್ಸಿಪಾಸ್ಗೆ ಮಾರ್ಸೆಲ್ಲೆ ಓಪನ್ ಟೆನಿಸ್ ಗರಿ

Update: 2019-02-25 23:47 IST

ಮಾರ್ಸಿಲ್ಲೆ(ಫ್ರಾನ್ಸ್), ಫೆ.25: ಅಗ್ರಶ್ರೇಯಾಂಕಿತ ಆಟಗಾರ ಗ್ರೀಸ್‌ನ ಸ್ಟಿಫನೋಸ್ ಸಿಟ್ಸಿಪಾಸ್ ತಮ್ಮ ಈ ವರ್ಷದ ಪ್ರಥಮ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರವಿವಾರ ರಾತ್ರಿ ನಡೆದ ಮಾರ್ಸಿಲ್ಲೆ ಓಪನ್‌ನ ಫೈನಲ್ ಪಂದ್ಯದಲ್ಲಿ ಅವರು ಕಝಕ್‌ಸ್ತಾನದ ಮಿಖಾಯಿಲ್ ಕುಕುಷ್ಕಿನ್ ಅವರನ್ನು 7-5, 7-6(5) ಸೆಟ್‌ಗಳಿಂದ ಸೋಲಿಸಿದರು.

ಕಳೆದ ತಿಂಗಳು ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್‌ವರೆಗೆ ತಲುಪಿದ್ದ ಸಿಟ್ಸಿಪಾಸ್, ಈ ಪಂದ್ಯದಲ್ಲಿ 31 ವರ್ಷದ ಕುಕುಷ್ಕಿನ್ ಅವರನ್ನು ಮಣಿಸಲು ಭಾರೀ ಪ್ರಯಾಸಪಟ್ಟರು. ಸುಮಾರು 2 ತಾಸುಗಳ ಕಾಲ ನಡೆದ ಪಂದ್ಯದಲ್ಲಿ ಅವರು 14 ಏಸ್‌ಗಳನ್ನು ಸಿಡಿಸಿದರು. ಮೊದಲ ಸೆಟನ್ನು 7-5ರಿಂದ ಗೆದ್ದುಕೊಂಡ ಅವರು, ಎರಡನೇ ಸೆಟ್‌ನಲ್ಲಿ ಮುಂಗೈ ಹಾಗೂ ಹಿಂಗೈ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿ ಅಂತಿಮವಾಗಿ 7-6ರಿಂದ ವಶಪಡಿಸಿಕೊಂಡರು. ಈ ಸೆಟ್ ಟೈಬ್ರೇಕರ್‌ವರೆಗೂ ಸಾಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News