×
Ad

ಅಂಪೈರ್‌ಗಳು, ಅಧಿಕಾರಿಗಳಿಗೆ ಹಾಕಿ ಇಂಡಿಯಾದಿಂದ ಆನ್‌ಲೈನ್ ಟೆಸ್ಟ್

Update: 2019-02-26 23:47 IST

ಹೊಸದಿಲ್ಲಿ, ಫೆ.26: ದೇಶದಲ್ಲಿ ಅಂಪೈರಿಂಗ್ ಹಾಗೂ ಅಧಿಕಾರಿಗಳ ಗುಣಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಹಾಕಿ ಇಂಡಿಯಾವು ಮಾ.29ರಂದು ಆನ್‌ಲೈನ್ ಪರೀಕ್ಷೆ ನಡೆಸುವುದಾಗಿ ಮಂಗಳವಾರ ಘೋಷಿಸಿದೆ.

ಅಂಪೈರ್‌ಗಳು ಹಾಗೂ ತಾಂತ್ರಿಕ ಅಧಿಕಾರಿಗಳ ವೃತ್ತಿಪರ ಬೆಳವಣಿಗೆಯ ಒಂದು ಭಾಗವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದು ಅವರಿಗೆ ತಮ್ಮ ಕೌಶಲ್ಯ ಹಾಗೂ ಜ್ಞಾನಾಧಾರಿತ ಪರಿಣತಿಯನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಈ ಪರೀಕ್ಷೆ ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟದ(ಎಫ್‌ಐಎಚ್) ಅಧಿಕಾರಿಗಳ ಜ್ಞಾನಮಟ್ಟವನ್ನು ವಿವರಿಸುವ ನಿರೀಕ್ಷೆಯಿದೆ.

ಎಫ್‌ಐಎಚ್ ನಿಯಮಗಳ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಜ್ಞಾನದ ಪರೀಕ್ಷೆಯತ್ತ ಈ ಟೆಸ್ಟ್ ಗಮನ ನೀಡಲಿದೆ. ಪರೀಕ್ಷೆ ತೆಗೆದುಕೊಳ್ಳುವ ಯಾವುದೇ ಅಭ್ಯರ್ಥಿಯು ಹಾಕಿ ಇಂಡಿಯಾದ ಶಾಶ್ವತ ಅಥವಾ ಸಹಾಯಕ ರಾಜ್ಯ ಸದಸ್ಯ ಘಟಕಗಳೊಂದಿಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಮಂಗಳವಾರದಿಂದಲೇ ನೋಂದಣಿ ಆರಂಭವಾಗಿದ್ದು ಮಾ.15ರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News