×
Ad

ಮುಂಬೈ ತಂಡಕ್ಕೆ ರಹಾನೆ ಅಲಭ್ಯ

Update: 2019-03-06 23:40 IST

ಮುಂಬೈ, ಮಾ.6: ತೊಡೆನೋವಿನಿಂದ ಬಳಲುತ್ತಿರುವ ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ 2018-19ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದಿಂದ ಹೊರಗುಳಿಯಲಿದ್ದಾರೆ.

ಅವರ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಗುಂಪು ಹಂತದಲ್ಲಿ 350 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿರುವ ಶ್ರೇಯಸ್ ಅಯ್ಯರ್ ಮುನ್ನಡೆಸುವ ಸಾಧ್ಯತೆಯಿದೆ. ಲೀಗ್‌ನ ಆರು ಪಂದ್ಯಗಳಲ್ಲಿ 24 ವರ್ಷದ ಶ್ರೇಯಸ್ ಎರಡು ಶತಕಗಳನ್ನು ಬಾರಿಸಿ ಗಮನಸೆಳೆದಿದ್ದಾರೆ.

6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಜಯ ಸಾಧಿಸಿರುವ ಮುಂಬೈ ತಂಡ ಗುಂಪು ‘ಸಿ’ ಯಲ್ಲಿ ಅಗ್ರಸ್ಥಾನಿಯಾಗಿದೆ ಆದರೆ ರಹಾನೆ 9.67ರ ಸರಾಸರಿಯಲ್ಲಿ ಕೇವಲ 58 ರನ್ ಗಳಿಸಿದ್ದು ಕಳಪೆ ಫಾರ್ಮ್‌ನಲ್ಲಿದ್ದಾರೆ. ಆದರೂ ಅವರ ವೃತ್ತಿಜೀವನದ ಕ್ರಿಕೆಟ್ ಅನುಭವ ತಂಡದ ನೆರವಿಗೆ ಬಂದಿದೆ.

ಸೂಪರ್ ಲೀಗ್ ಹಂತದ ಎಲ್ಲ ಪಂದ್ಯಗಳು ಇಂದೋರ್‌ನಲ್ಲಿ ನಡೆಯಲಿವೆ. ಮಾ.8ರಂದು ಮುಂಬೈ ತಂಡವು ಕರ್ನಾಟಕ (ಮಾ.8), ದಿಲ್ಲಿ (ಮಾ.9), ವಿದರ್ಭ (ಮಾ.11) ಹಾಗೂ ಉತ್ತರಪ್ರದೇಶ (ಮಾ.12) ತಂಡಗಳನ್ನು ಎದುರಿಸಲಿದೆ. ಮಾರ್ಚ್ 14ರಂದು ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News