×
Ad

ಇಂದು ಸಂಜೆ 5 ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಪ್ರಕಟ

Update: 2019-03-10 12:19 IST

ಹೊಸದಿಲ್ಲಿ, ಮಾ.10: ಇಂದು ಸಂಜೆ  5 ಗಂಟೆಗೆ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗದ ಸಭೆ ನಡೆಯಲಿದ್ದು,   ಮುಂಬರುವ ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದೆ.

ಶನಿವಾರ  ನಾನಾ ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಗಿತ್ತು. ಈಗಿನ    ಲೋಕಸಭೆಯ ಅವಧಿ ಜೂ.3ರಂದು ಕೊನೆಗೊಳ್ಳಲಿದೆ. 

ವಿಜ್ಞಾನ ಭವನ ಸರಕಾರದ ಹಲವು ಪ್ರಮುಖ ನಿರ್ಧಾರಗಳಿಗೆ ಸಾಕ್ಷಿಯಾಗಿದೆ. 2014ರಲ್ಲಿ ಮಾ.5ರಂದು ಇಲ್ಲಿ ನಡೆದ ಸಭೆಯಲ್ಲಿ 2014ರ ಲೋಕಸಭೆಯ ದಿನಾಂಕ ಪ್ರಕಟವಾಗಿತ್ತು.

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಏಳೆಂಟು ಹಂತಗಳಲ್ಲಿ ನಡೆಯುವ ಲೋಕಸಭೆಯ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ವಿಧಾನ ಸಭೆ ವಿಸರ್ಜನೆಗೊಂಡು ಮೇ ಕೊನೆಗೆ 6 ತಿಂಗಳಾಗುತ್ತದೆ. ಇದೇ ವೇಳೆ ಜಮ್ಮ ಮತ್ತು ಕಾಶ್ಮೀರ ವಿಧಾನ ಸಭೆಗೆ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News