ಮೂರನೇ ಟೆಸ್ಟ್‌ಗೆ ವಿಲಿಯಮ್ಸನ್ ಅಲಭ್ಯ?
Update: 2019-03-12 23:59 IST
ವೆಲ್ಲಿಂಗ್ಟನ್, ಮಾ.12: ಭುಜನೋವಿನಿಂದ ಬಳಲುತ್ತಿರುವ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಮಂಗಳವಾರ ಬೆಳಗ್ಗೆ ಲಭ್ಯವಾಗಿರುವ ಎಂಆರ್‌ಐ ಸ್ಕಾನಿಂಗ್‌ನಲ್ಲಿ ಗಾಯದ ಪ್ರಮಾಣ ತಿಳಿದುಬಂದಿದೆ. ಬಾಂಗ್ಲಾ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಬೆಳಗ್ಗಿನ ಅವಧಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ವಿಲಿಯಮ್ಸನ್‌ಗೆ ಗಾಯವಾಗಿತ್ತು.ನಾಲ್ಕನೇ ದಿನದಲ್ಲಿ ಎಡ ಭುಜ ನೋವಿನ ಹೊರತಾಗಿಯೂ ಬ್ಯಾಟಿಂಗ್ ಮಾಡಿದ್ದರು. ‘‘3ನೇ ಟೆಸ್ಟ್ ಪಂದ್ಯ ನಡೆಯುವ ಕ್ರೈಸ್ಟ್‌ಚರ್ಚ್‌ಗೆವಿಲಿಯಮ್ಸನ್ ತಂಡದೊಂದಿಗೆ ಇರುತ್ತಾರೆ. ಶನಿವಾರ ಆರಂಭವಾಗುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಿಂತ ಮೊದಲು ಅವರನ್ನು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು’’ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.