ಸನಾತನ ಸಂಸ್ಥೆ ಕಾರ್ಯಕರ್ತರ ಜತೆ ಕಾಂಗ್ರೆಸ್ ಅಭ್ಯರ್ಥಿ: ಫೋಟೊ ವೈರಲ್

Update: 2019-03-24 13:47 GMT

ಮುಂಬೈ, ಮಾ.22: ರತ್ನಗಿರಿ- ಸಿಂಧುದುರ್ಗ ಕ್ಷೇತ್ರದ ಕಾಂಗ್ರೆಸ್ ಮುಖಂಡ ನವೀನ್‍ ಚಂದ್ರ ಬಂಡಿವಾಡೇಕರ್ ಅವರು 2018ರ ಸೆಪ್ಟೆಂಬರ್ ನಲ್ಲಿ, ಸನಾತನ ಸಂಸ್ಥೆಯ ಕಾರ್ಯಕರ್ತರ ಪರವಾಗಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರ ನಾಮಪತ್ರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಮಹಾರಾಷ್ಟ್ರದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ 2018ರ ಆಗಸ್ಟ್ ನಲ್ಲಿ ಬಂಧಿತನಾಗಿದ್ದ ವೈಭವ್ ರಾವತ್ ನನ್ನು ಬೆಂಬಲಿಸಿ ನಡೆದ ಸಮಾರಂಭವೊಂದರಲ್ಲಿ ಬಂಡಿವಾಡೇಕರ್ ಭಾಗವಹಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗಳವಾರ ಬಂಡಿವಾಡೇಕರ್ ಅವರ ಉಮೇದುವಾರಿಕೆಯನ್ನು ಘೋಷಿಸಲಾಗಿತ್ತು. ಎನ್‍ಸಿಪಿ ನಾಯಕ ಜಿತೇಂದ್ರ ಅವ್ಹದ್ ಅವರು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಬದಲಿಸಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದರು.

ಆದರೆ ಕಾಂಗ್ರೆಸ್ ಪಕ್ಷ ಬಂಡಿವಾಡೇಕರ್ ಅವರನ್ನು ಸಮರ್ಥಿಸಿಕೊಂಡಿತ್ತು. "ಅವರು ಸನಾತನ ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸಿರಲೂ ಇಲ್ಲ; ಆ ಸಂಘಟನೆ ಬಗ್ಗೆ ಅನುಕಂಪವನ್ನೂ ಹೊಂದಿಲ್ಲ. ಸಮುದಾಯದಿಂದ ಒತ್ತಡ ಇದ್ದ ಹಿನ್ನೆಲೆಯಲ್ಲಿ ಮತ್ತು ಪೊಲೀಸ್ ಕ್ರಮ ಪಕ್ಷಪಾತದಿಂದ ಕೂಡಿದ್ದು ಎಂಬ ವದಂತಿ ಇದ್ದ ಹಿನ್ನೆಲೆಯಲ್ಲಿ, ಭಂಡಾರಿ ಸಮಾಜದ ಅಧ್ಯಕ್ಷರಾಗಿ ವಿಚಾರಿಸಲು ತೆರಳಿದ್ದರು" ಎಂದು ಪಕ್ಷ ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News