×
Ad

ಅಮಿತ್ ಶಾ ಬರುವಾಗ 'ಆಪ್ ಕಿ ಅದಾಲತ್' ನ ನ್ಯಾಯಾಧೀಶರೂ ಮಾಯ !

Update: 2019-03-29 11:06 IST

ಹೊಸದಿಲ್ಲಿ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ಇಂಡಿಯಾ ಟಿವಿಯ ಜನಪ್ರಿಯ ಸಂದರ್ಶನ ಕಾರ್ಯಕ್ರಮ, ಅದರ ಮಾಲಕ ರಜತ್ ಶರ್ಮ ಅವರು ನಿರೂಪಕರಾಗಿರುವ 'ಆಪ್ ಕಿ ಅದಾಲತ್' ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ  ಈ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿರುವ ನ್ಯಾಯಾಧೀಶರು ಗುರುವಾರ ಹಾಜರಿಲ್ಲದೇ ಇದ್ದುದು ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರಾ ಈ ಕಾರ್ಯಕ್ರಮದ ಸ್ಕ್ರೀನ್ ಶಾಟ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಟಿವಿ ಕಾರ್ಯಕ್ರಮದ ನ್ಯಾಯಾಧೀಶರೂ ಬಿಜೆಪಿ ಅಧ್ಯಕ್ಷರ ಬಗ್ಗೆ ಭಯ ಹೊಂದಿದ್ದಾರೆಂದು ಪರೋಕ್ಷವಾಗಿ ಹೇಳುವ ಯತ್ನ ನಡೆಸಿದ್ದಾರೆ.

"ಕ್ಯೂಟಿ @ಅಮಿತ್‍ಶಾ  ಜನತಾ ಕಿ ಅದಾಲತ್ ನಲ್ಲಿ. ಇದು ನಾನು ನೋಡಿದ ತೀರ್ಪುಗಾರರಿಲ್ಲದ ಮೊದಲ ಎಪಿಸೋಡ್,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಕಾಮಿಡಿ ತಂಡ 'ಐಸಿ ತೈಸಿ ಡೆಮಾಕ್ರಸಿ' ಕೂಡ ಕಾರ್ಯಕ್ರಮದ ಎರಡು ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ "ಎಎಸ್ ಅಲ್ಲಿಗೆ ಆಗಮಿಸಿದಾಗ ಆಪ್ ಕಿ ಅದಾಲತ್ ಕೂಡ ತೀರ್ಪುಗಾರರನ್ನು ತೆಗೆದು ಹಾಕಿದೆ #ಜಾನ್‍ಬಚ್‍ಗಯೀ'' ಎಂದು ಬರೆದಿದೆ.

ಈ ಹಿಂದೆ ಅಖಿಲೇಶ್ ಯಾದವ್ ಉತ್ತರ ಪ್ರದೇಶ ಸಿಎಂ ಆಗಿದ್ದಾಗ ಭಾಗವಹಿಸಿದ್ದ ಎಪಿಸೋಡ್ ನಲ್ಲೂ ತೀರ್ಪುಗಾರರಿರಲಿಲ್ಲ ಎಂದು ಒಬ್ಬ ಟ್ವಿಟರಿಗ ನೆನಪಿಸಿಕೊಂಡಿದ್ದಾರೆ.

ಅಮಿತ್ ಶಾ ಎದುರಿಸುತ್ತಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಎಚ್ ಬಿ ಲೋಯಾ ಅವರು ಶಂಕಾಸ್ಪದವಾಗಿ ಸಾವಿಗೀಡಾಗಿರುವ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಂಡು ಗುರುವಾರದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಿರಲಿಲ್ಲವೆಂಬರ್ಥದಲ್ಲಿ ಹಲವರು ಟ್ವೀಟ್ ಮಾಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News