ರಾಜಸ್ಥಾನ ನಾಯಕನಾಗಿ ರಹಾನೆ ಬದಲಿಗೆ ಸ್ಟೀವನ್ ಸ್ಮಿತ್

Update: 2019-04-20 18:07 GMT

ಜೈಪುರ, ಎ.20: ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಶನಿವಾರ ಅಜಿಂಕ್ಯ ರಹಾನೆ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.

ಈ ತನಕ ಐಪಿಎಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ರಾಜಸ್ಥಾನ ತಂಡ ಸ್ಮಿತ್ ನಾಯಕತ್ವದಲ್ಲಿ ಉಳಿದಿರುವ ಲೀಗ್ ಪಂದ್ಯಗಳಲ್ಲಿ ಚೇತರಿಕೆಯ ಪ್ರದರ್ಶನದನಿರೀಕ್ಷೆಯಲ್ಲಿದೆ.

ಕಳೆದ ವರ್ಷ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಸ್ಮಿತ್ ಕೈಗೆ ಮತ್ತೊಮ್ಮೆ ರಾಜಸ್ಥಾನ ತಂಡದ ನಾಯಕತ್ವದಜವಾಬ್ದಾರಿ ನೀಡಲಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನದ ಪಂದ್ಯಕ್ಕಿಂತ ಮೊದಲು ಈ ಘೋಷಣೆ ಮಾಡಲಾಗಿದೆ. ರಾಜಸ್ಥಾನ ತಂಡ ಟೂರ್ನಿಯಲ್ಲಿ ಈ ತನಕ ಆಡಿರುವ 8 ಪಂದ್ಯಗಳ ಪೈಕಿಆರರಲ್ಲಿ ಸೋಲುಂಡಿದೆ. ಪ್ಲೇ-ಆಫ್‌ಗೆ ತೇರ್ಗಡೆಯಾಗುವ ತನ್ನ ಅವಕಾಶವನ್ನು ಜೀವಂತವಾಗಿಟ್ಟುಕೊಳ್ಳಲು ಉಳಿದ 6 ಪಂದ್ಯಗಳ ಪೈಕಿ ಕನಿಷ್ಠ 5 ಪಂದ್ಯಗಳಲ್ಲಿ ಜಯಸಾಧಿಸಲೇಬೇಕಾಗಿದೆ.

ಸ್ಮಿತ್‌ರನ್ನು 2018ರ ಆವೃತ್ತಿಯ ಐಪಿಎಲ್ ಆರಂಭವಾಗುವ ಮೊದಲೇ ರಾಜಸ್ಥಾನದ ನಾಯಕನ್ನಾಗಿ ನೇಮಿಸಲಾಗಿತ್ತು. ಆದರೆ, ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್ ಸಿಕ್ಕಿಬಿದ್ದಕಾರಣ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು. ಆಗ ರಹಾನೆಗೆ ನಾಯಕತ್ವವಹಿಸಲಾಗಿತ್ತು.

‘‘ಸ್ಮಿತ್ ಯಾವಾಗಲೂ ರಾಜಸ್ಥಾನ ತಂಡದ ನಾಯಕತ್ವದ ತಂಡದಲ್ಲಿರುತ್ತಿದ್ದರು. ರಹಾನೆ ತಂಡದ ಮುಖ್ಯ ಧ್ವನಿಯಾಗಿ ಮುಂದುವರಿಯಲಿದ್ದಾರೆ. ಉತ್ತಮ ಫಲಿತಾಂಶದೊಂದಿಗೆಅಂಕಪಟ್ಟಿಯಲ್ಲಿ ಭಡ್ತಿ ಪಡೆಯುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ’’ ಎಂದು ರಾಜಸ್ಥಾನ ತಂಡ ತಿಳಿಸಿದೆ. ಸ್ಮಿತ್ ಮೇ 1ರ ತನಕ ಐಪಿಎಲ್‌ಗೆ ಲಭ್ಯವಿರುತ್ತಾರೆ. ಆವೇಳೆಗೆ ರಾಜಸ್ಥಾನ ತನ್ನ ಹೆಚ್ಚಿನ ಲೀಗ್ ಪಂದ್ಯಗಳನ್ನು ಆಡಲಿದೆ. ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಮುಂದಿನ ವಾರ ಇಂಗ್ಲೆಂಡ್‌ನ ವಿಶ್ವಕಪ್ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಸ್ಮಿತ್ ಈ ವರ್ಷ ಆಡಿರುವ 7 ಪಂದ್ಯಗಳಲ್ಲಿ ಒಟ್ಟು 186 ರನ್ ಗಳಿಸಿದ್ದಾರೆ. 73 ಗರಿಷ್ಠ ಸ್ಕೋರಾಗಿದೆ. ಮತ್ತೊಂದೆಡೆ, ರಹಾನೆ 25.12ರಸರಾಸರಿಯಲ್ಲಿ 201 ರನ್ ಗಳಿಸಿದ್ದು, 70 ಗರಿಷ್ಠ ಸ್ಕೋರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News