ಬೋಧಗಯಾದಲ್ಲಿ ಬೌದ್ಧ ಭಿಕ್ಷುಗಳಿಂದ ದಲಿತ ಬಾಲಕಿಗೆ ಲೈಂಗಿಕ ಶೋಷಣೆ

Update: 2019-04-24 15:58 GMT

ಪಾಟ್ನಾ,ಎ.24: ಬಿಹಾರದ ಬೋಧಗಯಾದ ಇಂಡೋ-ಥಾಯ್ ಬುದ್ಧಿಸ್ಟ್ ಸೊಸೈಟಿಯ ಮೂವರು ಭಿಕ್ಷುಗಳು 10ರ ಹರೆಯದ ದಲಿತ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಕಾರ್ಯಕರ್ತರೋರ್ವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪೊಲೀಸರು ಮೂವರು ಭಿಕ್ಷುಗಳ ವಿರುದ್ಧ್ದ ಲೈಂಗಿಕ ದೌರ್ಜನ್ಯ ಆರೋಪಗಳ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಎ.ಸಿ.ಲಾಮಾ,ರತ್ನೇಶ್ವರ ಚಕ್ಮಾ ಮತ್ತು ಛೋಟಾ ಭಂತೆ ಅವರು ಆರೋಪಿ ಬೌದ್ಧ ಭಿಕ್ಷುಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ಪೊಲೀಸರು ಮಂಗಳವಾರ ನ್ಯಾಯಿಕ ದಂಡಾಧಿಕಾರಿಗಳ ಎದುರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.

ಆರೋಪಿಗಳು ಹಲವಾರು ವರ್ಷಗಳಿಂದ ಬೋಧಗಯಾದಲ್ಲಿ ವಾಸವಿದ್ದರು ಮತ್ತು ನಿಯಮಿತವಾಗಿ ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡುತ್ತಿದ್ದರು.ಬಾಲಕಿ ಕಡುಬಡತನದ ಕುಟುಂಬಕ್ಕೆ ಸೇರಿದ್ದು,ಆಕೆಯ ಹೆತ್ತವರನ್ನು ಸುಮ್ಮನಿರಿಸಲು ಅವರಿಗೆ ಹಣವನ್ನು ನೀಡುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News