×
Ad

ನವೊಮಿ ಒಸಾಕಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

Update: 2019-04-26 23:58 IST

ಸ್ಟಟ್‌ಗಾರ್ಟ್ (ಜರ್ಮನಿ), ಎ.26: ವಿಶ್ವದ ನಂ.1 ಆಟಗಾರ್ತಿ ಜಪಾನ್ ನವೊಮಿ ಒಸಾಕಾ ಇಲ್ಲಿ ನಡೆಯುತ್ತಿರುವ ಪೋರ್ಸ್‌ಚೆ ಟೆನಿಸ್ ಗ್ರಾಂಡ್‌ಫಿಕ್ಸ್ ನಲ್ಲಿ ತೈವಾನ್‌ನ ಶೆಹ್ ಸು ವೇಯ್ ಅವರನ್ನು 6-4, 6-3 ಸೆಟ್‌ಗಳಿಂದ ಮಣಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಎರಡು ಬಾರಿಯ ಗ್ರಾನ್‌ಸ್ಲಾಮ್ ವಿಜೇತೆ, ಕ್ಲೇ ಕೋರ್ಟ್‌ನಲ್ಲಿ ಇನ್ನಷ್ಟೇ ಪ್ರಶಸ್ತಿ ಗಳಿಸಲಿರುವ ನವೊಮಿ ಅವರು ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರೂ ಗೆಲುವು ತಮ್ಮದಾಗಿಸಿಕೊಂಡರು. ಆ ಮೂಲಕ ಮಿಯಾಮಿ ಓಪನ್‌ನಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡರು.

ಮುಂದಿನ ತಿಂಗಳು ನಡೆಯಲಿರುವ ಫ್ರೆಂಚ್ ಓಪನ್ ಅಂಗಣದಂತೆ ಈ ಅಂಗಣವನ್ನು ಸಿದ್ಧಪಡಿಸಲಾಗಿದ್ದು, ಆರಂಭದಲ್ಲಿ ನವೊಮಿ ಸ್ವಲ್ಪ ಅನನುಕೂಲ ಭಾವ ಅನುಭವಿಸಿದರು. ಈ ಗೆಲುವಿನ ಮೂಲಕ ಅವರು ಈ ವಾರದ ನಂತರ ಪ್ರಕಟವಾಗುವ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಮುಂದಿನ ಪಂದ್ಯದಲ್ಲಿ ಜಪಾನ್ ಆಟಗಾರ್ತಿಯು ಕ್ರೊಯೇಶ್ಯದ ಡೊನ್ನಾ ವೆಕಿಕ್‌ರನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ವೆಕಿಕ್ ಅವರು ದರಿಯಾ ಕಸತ್ಕ್ಕಿನಾ ಅವರನ್ನು 6-1, 7-5ರಿಂದ ಮಣಿಸಿದರು.

ಕೆರ್ಬರ್, ಅಝರೆಂಕಾ ಗೆಲುವಿನ ನಗೆ

ವಿಶ್ವದ ನಂ.5 ಆಟಗಾರ್ತಿ ಜರ್ಮನಿಯ ಅಂಜೆಲಿಕ್ ಕೆರ್ಬರ್ ಅವರು ವೈಲ್ಡ್ ಕಾರ್ಡ್ ಪ್ರವೇಶಿತ ಆಟಗಾರ್ತಿ ಆ್ಯಂಡ್ರಿಯ ಪೆಟ್ಕೊವಿಕ್‌ರನ್ನು 6-2, 6-4ರಿಂದ ಸೋಲಿಸಿ ಮುನ್ನಡೆದರು. ಅವರು ಮುಂದಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಕಿಕಿ ಬೆರ್ಟೆನ್ಸ್ ಅವರ ಸವಾಲನ್ನು ಎದುರಿಸುವರು.

ಬೆರ್ಟೆನ್ಸ್ ಅವರು ಬೆಲಿಂಡಾ ಬೆನ್ಸಿಕ್ ವಿರುದ್ಧ 4-6, 6-3, 6-4ರಿಂದ ಗೆದ್ದರು. ವಿಶ್ವದ ಮಾಜಿ ನಂ.1 ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಝರೆಂಕಾ ಅವರು ನಾಲ್ಕನೇ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್ ಕರೋಲಿನಾ ಪ್ಲಿಸ್ಕೋವಾರನ್ನು ಮಣಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News