×
Ad

ಜೈಲಿನಲ್ಲಿದ್ದೇ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದ ಕೈದಿಗಳು!

Update: 2019-04-28 22:06 IST

ಮುಝಫ್ಫರ್‌ನಗರ,ಎ.28: ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ಸೇರಿದಂತೆ ಐವರು ಕೈದಿಗಳು ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷದ್‌ನ 10ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆಗೊಂಡಿದ್ದಾರೆ. ಪರೀಕ್ಷಾ ಫಲಿತಾಂಶಗಳು ಶನಿವಾರ ಪ್ರಕಟಗೊಂಡಿವೆ.

ಈ ಕೈದಿಗಳು ಗಾಝಿಯಾಬಾದ್‌ನ ದಸ್ನಾ ಜೈಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಜೈಲು ಅಧೀಕ್ಷಕ ಎ.ಕೆ.ಸಕ್ಸೇನಾ ತಿಳಿಸಿದರು.

ಪರೀಕ್ಷೆಯಲ್ಲಿ ತೇರ್ಗಡೆಗೊಂಡವರಲ್ಲಿ ಕಪಿಲ,ಪಂಕಜ ಮತ್ತು ವಿಪುಲಕುಮಾರ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರೆ ಅರ್ಜುನ ಎಂಬಾತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದಾನೆ. ರಾಹುಲ್ ಎಂಬಾತ ಇನ್ನೋರ್ವ ಕೈದಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News