18 ವರ್ಷಗಳಲ್ಲಿ ಪ್ರಧಾನಿ 5, ರಾಹುಲ್ ಗಾಂಧಿ 6 ಬಾರಿ ಆದಾಯ ತೆರಿಗೆ ಮರುಪಾವತಿ ಸ್ವೀಕಾರ

Update: 2019-04-29 05:26 GMT

ಹೊಸದಿಲ್ಲಿ, ಎ. 28: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 18 ವರ್ಷಗಳಲ್ಲಿ ಕನಿಷ್ಠ 5 ಬಾರಿ ಆದಾಯ ತೆರಿಗೆ ಮರು ಪಾವತಿ ಪಡೆದಿದ್ದಾರೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 6 ಬಾರಿ ಆದಾಯ ತೆರಿಗೆ ಮರು ಪಾವತಿ ಸ್ವೀಕರಿಸಿದ್ದಾರೆ.

ಇದರ ಹೊರತಾಗಿ ಪ್ರಧಾನಿ ಮೋದಿಯ ವಿಚಾರದಲ್ಲಿ 2015-16 ಮತ್ತು 2012-13ರ ವೌಲ್ಯಮಾಪನ ವರ್ಷದ ಮರು ಪಾವತಿಯನ್ನು ಬಾಕಿ ಇದ್ದ ಬೇಡಿಕೆಗೆ ಸರಿದೂಗಿಸಲಾಗಿದೆ. ಇದೇ ವೇಳೆ ರಾಹುಲ್ ಗಾಂಧಿ ವಿಷಯದಲ್ಲಿ 2011-12ರ ವೌಲ್ಯಮಾಪನ ವರ್ಷದ ಮರು ಪಾವತಿಯನ್ನು ಬಾಕಿ ಇರುವ ಬೇಡಿಕೆಗೆ ಹೊಂದಾಣಿಕೆ ಮಾಡಲಾಗಿದೆ. ಇದನ್ನು ಎನ್‌ಎಸ್‌ಡಿಎಲ್ ಇ-ಗವರ್ನೆನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿಭಾಯಿಸುವ ಆದಾಯ ತೆರಿಗೆ ಇಲಾಖೆಯ ತೆರಿಗೆ ಮಾಹಿತಿ ಜಾಲ ಒದಗಿಸಿದ ‘ಮರು ಪಾವತಿ ಸ್ಥಿತಿ’ ಸೇವೆಯ ಆಧಾರದಲ್ಲಿ ತಿಳಿಸಲಾಗಿದೆ.

ಈ ಆನ್‌ಲೈನ್ ವೇದಿಕೆಯಲ್ಲಿ 2001-02ರಿಂದ ಮರು ಪಾವತಿ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯ ಪಾನ್ ಸಂಖ್ಯೆಯನ್ನು ಒದಗಿಸುವ ಮೂಲಕ ಈ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News