×
Ad

ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿದ ಕಿಪ್ಚೋಗೆ

Update: 2019-04-28 23:49 IST

ಲಂಡನ್,ಎ.28: ಕೀನ್ಯದ ಎಲಿಯುಡ್ ಕಿಪ್ಚೋಗೆ ಎರಡನೇ ಅತ್ಯಂತ ವೇಗದಲ್ಲಿ ಗುರಿ ತಲುಪುವ ಮೂಲಕ ಲಂಡನ್ ಮ್ಯಾರಥಾನ್‌ನಲ್ಲಿ ನಾಲ್ಕನೇ ಬಾರಿ ಮೊದಲ ಸ್ಥಾನ ಪಡೆದು ದಾಖಲೆ ನಿರ್ಮಿಸಿದರು.

ಕೀನ್ಯಾದ ಓಟಗಾರ್ತಿ ಬ್ರಿಗಿಡ್ ಕಾಸ್ಜೆ ಮಹಿಳೆಯರ ವಿಭಾಗದ ಮ್ಯಾರಥಾನ್‌ನಲ್ಲಿ ಚಾಂಪಿಯನ್ ಎನಿಸಿಕೊಂಡರು.

34ರ ಹರೆಯದ ಕಿಪ್ಚೋಗೆ ಇಥಿಯೋಪಿಯದ ಓಟಗಾರರಾದ ಮೊಸಿನೆಟ್ ಗೆರೆಮಿವ್ ಹಾಗೂ ವಸಿಹುನ್‌ರನ್ನು ಹಿಂದಿಕ್ಕಿ 26.2 ಮೈಲು(42.2 ಕಿಲೋಮೀಟರ್)ದೂರವನ್ನು 2 ಗಂಟೆ, 2 ನಿಮಿಷ ಹಾಗೂ 37 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

‘‘ಲಂಡನ್‌ನಲ್ಲಿ ನಾಲ್ಕನೇ ಬಾರಿ ಮ್ಯಾರಥಾನ್ ಓಟದಲ್ಲಿ ಜಯ ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆೞೞಎಂದು 2015, 16 ಹಾಗೂ 18ರ ಲಂಡನ್ ಮ್ಯಾರಥಾನ್‌ನ್ನು ಜಯಿಸಿರುವ ಕಿಪ್ಚೋಗೆ ತಿಳಿಸಿದ್ದಾರೆ.

ಮಹಿಳೆಯರ ಮ್ಯಾರಥಾನ್‌ನಲ್ಲಿ ಬ್ರಿಗಿಡ್ ಕಾಸ್ಗೆ 2:18:20 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ದ್ವಿತೀಯಾರ್ಧದಲ್ಲಿ ಕಾಸ್ಗೆ ಅತ್ಯಂತ ವೇಗವಾಗಿ ಓಡಿದರು. ಹಾಲಿ ಚಾಂಪಿಯನ್ ವಿವಿಯನ್ ಚೆರುಯೊಟ್(2:20:14) ಹಾಗೂ ಇಥಿಯೋಪಿಯದ ರೊಝಾ ಡೆರೆಜೆ(2:20:37)ಕ್ರಮವಾಗಿ 2ನೇ ಹಾಗೂ ಮೂರನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News