ರೋಮಾನಿಯಾದ ಐಸಾಕ್ ಭಾರತದ ಫುಟ್ಬಾಲ್ನ ತಾಂತ್ರಿಕ ನಿರ್ದೇಶಕರಾಗಿ ನೇಮಕ
Update: 2019-04-29 23:48 IST
ಹೊಸದಿಲ್ಲಿ, ಎ.29: ರೋಮಾನಿಯಾದ ಡೋರು ಐಸಾಕ್ ಭಾರತದ ಫುಟ್ಬಾಲ್ ತಂಡದ ನೂತನ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
60 ಮಂದಿ ಈ ಹುದ್ದೆಗೆ ಸ್ಪರ್ಧಾ ಕಣದಲ್ಲಿದ್ದರೂ, ಅಂತಿಮವಾಗಿ ಡೋರು ಐಸಾಕ್ ಸ್ಥಾನ ಪಡೆದಿದ್ದಾರೆ.
ಪ್ರಪಂಚದ ವಿವಿಧ ದೇಶಗಳ ಫುಟ್ಟಾಲ್ ತಂಡಗಳ ಕೋಚ್ ಆಗಿ ಅವರು ಮೂರು ದಶಕಗಳ ಕಾಲ ದುಡಿದಿದ್ದರು. ಇವರು ಯಕೋಮಾ ಮಾರಿನೊಸ್ ಫುಟ್ಬಾಲ್ ತಂಡ ಮೂರು ಬಾರಿ ಜೆ.ಪಿ.ಲೀಗ್ ಚಾಂಪಿಯನ್ ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದರು.
ಫ್ರಾನ್ಸ್, ಜಪಾನ್, ಅಮೆರಿಕ, ರೋಮಾನಿಯಾ, ಸೌದಿ ಅರೇಬಿಯಾ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಭಾರತ ತಂಡದಲ್ಲಿ ಇದೀಗ ಪ್ರಧಾನ ಹೆಡ್ ಕೋಚ್ ಇಲ್ಲ ಸ್ಟೀಫನ್ ಕಾನ್ಸೆಸ್ಟೆಂಟ್ ರಾಜೀನಾಮೆ ನೀಡಿದ ಬಳಿಕ ತಂಡದ ಕೋಚ್ ಹುದ್ದೆ ಖಾಲಿಯಾಗಿದೆ.