ವಿಂಬಲ್ಡನ್ ಪ್ರಶಸ್ತಿಯ ಮೊತ್ತಹೆಚ್ಚಳ
Update: 2019-04-30 23:54 IST
ಲಂಡನ್, ಎ.30: ಈ ಬಾರಿ ವಿಂಬಲ್ಡನ್ ಟೆನಿಸ್ ಪ್ರಶಸ್ತಿ ಜಯಿಸುವವರು 38 ಮಿಲಿಯನ್ ಪೌಂಡ್ಸ್ (49.4 ಮಿಲಿಯನ್ ಡಾಲರ್) ಮೊತ್ತದ ಬಹುಮಾನ ಪಡೆಯಲಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್ ವಿಂಬಲ್ಡನ್ ಪ್ರಶಸ್ತಿಯ ಮೊತ್ತ ಏರಿಕೆಯಾಗಿರುವುದನ್ನು ಮಂಗಳವಾರ ಪ್ರಕಟಿಸಿದೆ.
ಪುರುಷರ ಮತ್ತು ಮಹಿಳಾ ವಿಭಾಗದ ಚಾಂಪಿಯನ್‌ಗಳು ಈ ಬಾರಿ 2.35 ಮಿಲಿಯನ್ ಪೌಂಡ್ಸ್ ಬಹುಮಾನ ಪಡೆಯಲಿದ್ದಾರೆ.
ವಿಂಬಲ್ಡನ್‌ನ ಆರಂಭಿಕ ಹಂತದಲ್ಲಿ ಸೋತು ನಿರ್ಗಮಿಸುವವರಿಗೂ ದೊಡ್ಡ ಮೊತ್ತ ದೊರೆಯಲಿದೆ. ಸಿಂಗಲ್ಸ್‌ನ ಅರ್ಹತಾ ಸುತ್ತು,ಮತ್ತು 1ರಿಂದ 3ರ ಸುತ್ತು ತನಕ ಶೇ. 10ರಷ್ಟು ಏರಿಕೆಯಾಗಿದೆ. ಸಿಂಗಲ್ಸ್‌ನ ಸಿಂಗಲ್ಸ್‌ನಲ್ಲಿ ಪ್ರಥಮ ಸುತ್ತಿನಲ್ಲಿ ನಿರ್ಗಮಿಸುವವರಿಗೆ 45 ಸಾವಿರ ಪೌಂಡ್ಸ್ ಪರಿಹಾರ ದೊರೆಯಲಿದೆ.