×
Ad

ಕೇರಳದ ಏಕೈಕ ಮುಸ್ಲಿಂ ರಾಜಮನೆತನದ ಮುಖ್ಯಸ್ಥೆ ಅರಕ್ಕಲ್ ಬೀಬಿ ನಿಧನ

Update: 2019-05-04 20:52 IST

ಕಣ್ಣೂರು,ಮೇ 4: ಹಿಂದಿನ ಅರಕ್ಕಲ್ ರಾಜ ಮನೆತನದ ಮುಖ್ಯಸ್ಥೆ ಆದಿರಾಜ ಸುಲ್ತಾನಾ ಫಾತಿಮಾ ಮುತ್ತು ಬೀಬಿ (86) ಅವರು ವಯೋಸಂಬಂಧಿ ಕಾಯಿಲೆಗಳಿಂದಾಗಿ ಶನಿವಾರ ಇಲ್ಲಿಗೆ ಸಮೀಪದ ತಲಶ್ಶೇರಿಯ ತನ್ನ ನಿವಾಸದಲ್ಲಿ ನಿಧನರಾದರು.

ದಿ.ಸಿ.ಪಿ.ಕುಂಞಿ ಅಹ್ಮದ್ ಇಲಾಯ ಅವರ ಪತ್ನಿಯಾಗಿದ್ದ ಮುತ್ತು ಬೀಬಿ ಪುತ್ರಿ ಖತೀಜಾರನ್ನು ಅಗಲಿದ್ದಾರೆ.

ಕಣ್ಣಾನೂರು(ಈಗಿನ ಕಣ್ಣೂರು) ಮತ್ತು ದಕ್ಷಿಣ ಲಕ್ಷದ್ವೀಪವನ್ನು ಆಳಿದ್ದ ಅರಕ್ಕಲ್ ಕೇರಳದ ಏಕೈಕ ಮುಸ್ಲಿಂ ರಾಜ ಮನೆತನವಾಗಿತ್ತು.

ಸಂಪ್ರದಾಯದಂತೆ ಅರಕ್ಕಲ್ ರಾಜಮನೆತನದ ಮಹಿಳಾ ಮುಖ್ಯಸ್ಥರನ್ನು ‘ಅರಕ್ಕಲ್ ಬೀಬಿ’ ಎಂದು ಕರೆಯಲಾಗುತ್ತದೆ.

ಕಳೆದ ವರ್ಷ ತನ್ನ ಸೋದರಿ ಸುಲ್ತಾನಾ ಅರಕ್ಕಲ್ ಆದಿರಾಜ ಝೈನಬಾ ಆಯಿಶಾ ಬೀಬಿ ಅವರ ನಿಧನದ ಬಳಿಕ ಫಾತಿಮಾ ಮುತ್ತು ಬೀಬಿ ರಾಜ ಮನೆತನದ 39ನೇ ಮುಖ್ಯಸ್ಥರಾಗಿದ್ದರು. ರಾಜ ಮನೆತನದ ಮುಖ್ಯಸ್ಥೆಯಾಗಿ ಅವರು ಇಲ್ಲಿಯ ಪ್ರಸಿದ್ಧ ಅರಕ್ಕಲ್ ಮ್ಯೂಝಿಯಂ ಸೇರಿದಂತೆ ಹಲವಾರು ಪಾರಂಪರಿಕ ಸಂಸ್ಥೆಗಳ ಪೋಷಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News