ಕರ್ತವ್ಯಕ್ಕೆ ಹಾಜರಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವೀಡಿಯೊ ವೈರಲ್

Update: 2019-05-05 16:35 GMT

 ಹೊಸದಿಲ್ಲಿ, ಮೇ 5: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೈಹಿಕವಾಗಿ ಉತ್ತಮವಾಗಿರುವುದನ್ನು ತೋರಿಸುವ ಹಾಗೂ ಐಎಎಫ್ ಸಿಬ್ಬಂದಿಯೊಂದಿಗೆ ಫೊಟೋ ಕ್ಲಿಕ್ಕಿಸುತ್ತಿರುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಕರ್ತವ್ಯಕ್ಕೆ ಹಾಜರಾದ ಬಳಿಕ ಅಭಿನಂದನ್ ವರ್ಧಮಾನ್ ಕಾಣಿಸಿಕೊಳ್ಳುತ್ತಿರುವ ಮೊದಲ ವೀಡಿಯೊ ಇದಾಗಿದೆ.

 ಐಎಎಫ್ ಸಿಬ್ಬಂದಿ, ಗರುಡ್ ವಿಶೇಷ ಪಡೆ ಯೋಧರು ಹಾಗೂ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ ಸಿಬ್ಬಂದಿಯೊಂದಿಗೆ ಸೆಲ್ಫಿಗೆ ಫೋಸ್ ನೀಡುವ ಹಾಗೂ ನಗುತ್ತಿರುವ ಅಭಿನಂದನ್ ಅವರನ್ನು ಈ ವೀಡಿಯೊದಲ್ಲಿ ಕಾಣಬಹುದು. ತನಗೆ ಹಾರೈಸಿದ ಯೋಧರ ಕುಟುಂಬಕ್ಕಾಗಿ ತಾನು ಈ ಫೋಟೊಗಳನ್ನು ತೆಗೆಯುತ್ತಿದ್ದೇನೆ ಎಂದು ಅಭಿನಂದನ್ ಹೇಳುತ್ತಿರುವುದು ಕೂಡ ಈ ವೀಡಿಯೊದಲ್ಲಿ ಕೇಳಿಸುತ್ತದೆ.

 ‘ಭಾರತ್ ಮಾತಾಕಿ ಜೈ’, ‘ಡಿಎಸ್‌ಸಿ ಕಿ ಜೈ’ ಎಂದು ಯೋಧರು ಘೋಷಣೆಗಳನ್ನು ಕೂಗುವುದು ಕೂಡ ಈ ಪುಟ್ಟ ವೀಡಿಯೊ ದೃಶ್ಯಾವಳಿಯಲ್ಲಿ ಇದೆ. ವಿಮಾನ ಚಲಾಯಿಸುವ ಸಂದರ್ಭ ಧರಿಸುವ ಉಡುಪನ್ನು ಅಭಿನಂದನ್ ವರ್ಧಮಾನ್ ಧರಿಸಿದ್ದಾರೆ. ಆ ಉಡುಪಿನ ಮೇಲೆ ಸ್ಕ್ವಾಡ್ರನ್ ಚಿತ್ರವಿದೆ.

ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಕ್ಕಾಗಿ ಅಭಿನಂದನ್ ವರ್ಧಮಾನ್ ಅವರ ಹೆಸರನ್ನು ದೇಶದ ಮೂರನೇ ಅತಿ ಶ್ರೇಷ್ಠ ಯುದ್ಧ ಕಾಲದ ಪ್ರಶಸ್ತಿಯಾದ ವೀರ ಚಕ್ರಕ್ಕೆ ಐಎಎಫ್ ಶಿಫಾರಸು ಮಾಡಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News