ಗೋರಕ್ಷಕರ ಬೆಂಬಲಿಗ ಎಕ್ಬೋಟೆಗೆ ಗೋರಕ್ಷಕರಿಂದಲೇ ಹಲ್ಲೆ!

Update: 2019-05-08 11:28 GMT

ಪುಣೆ, ಮೇ 8: ಸಂಘಪರಿವಾರ ಕಾರ್ಯಕರ್ತ, ಗೋರಕ್ಷಕರ ಬೆಂಬಲಿಗ ಮಿಲಿಂದ್ ಎಕ್ಬೋಟೆಗೆ ಗೋರಕ್ಷಕರ ಗುಂಪೊಂದು ಥಳಿಸಿರುವ ಘಟನೆ ಪುಣೆಯ ಸಸ್ವಾಡ್ ಎಂಬಲ್ಲಿ ನಡೆದಿದೆ. ತಾನು ಝೆಂದೆವಾಡಿ ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಗೋರಕ್ಷಕರ ಗುಂಪೊಂದು ಆಗಮಿಸಿ ತನಗೆ ಮತ್ತು ಬೆಂಬಲಿಗರಿಗೆ ಥಳಿಸಿದೆ ಎಂದು ಎಕ್ಬೋಟೆ ಆರೋಪಿಸಿದ್ದಾನೆ.

ಸಸ್ವಾಡ್ ನಲ್ಲಿ ಗೋಶಾಲೆಯೊಂದನ್ನು ನಡೆಸುತ್ತಿರುವ ಪಂಡಿತ್ ಮೋದಕ್ ಸಹಿತ 50 ಮಂದಿಯ ವಿರುದ್ಧ ಎಕ್ಬೋಟೆ ದೂರು ನೀಡಿದ್ದಾನೆ. ಎಕ್ಬೋಟೆ ಗೋರಕ್ಷಕರ ಬೆಂಬಲಿಗನಾಗಿದ್ದು, ಆತ ಹಿಂದೆ ಪಂಡಿತ್ ಮೋದಕ್ ಜೊತೆ ಕೆಲಸ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಎಕ್ಬೋಟೆ ಆರೋಪಿಯಾಗಿದ್ದಾನೆ.

“ಕೆಲ ತಿಂಗಳ ಮೊದಲು ಮೋದಕ್ ನ ಗೋಶಾಲೆಯ ವಿರುದ್ಧ ಎಕ್ಬೋಟೆ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ. ಝೆಂದೆವಾಡಿಯ ದೇವಸ್ಥಾನಕ್ಕೆ ಎಕ್ಬೋಟೆ ಆಗಮಿಸಿದ್ದಾನೆ ಎನ್ನುವುದನ್ನು ಅರಿತ ಮೋದಕ್ ತನ್ನ ಗೋರಕ್ಷಕ ಬೆಂಬಲಿಗರೊಂದಿಗೆ ಆಗಮಿಸಿ ಹಲ್ಲೆ ನಡೆಸಿದ್ದಾನೆ” ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News