ವಿಹಾರಕ್ಕೆ ಯುದ್ಧ ನೌಕೆಯನ್ನು ಬಳಸಿದ್ದ ರಾಜೀವ್ ಗಾಂಧಿ: ಮೋದಿ ಹೊಸ ಆರೋಪ

Update: 2019-05-09 03:51 GMT

ಹೊಸದಿಲ್ಲಿ, ಮೇ 9: ಭಾರತದ ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆ ವಿಶೇಷ ದ್ವೀಪಕ್ಕೆ ವಿಹಾರಕ್ಕಾಗಿ ತೆರಳಲು ವೈಯಕ್ತಿಕ ಟ್ಯಾಕ್ಸಿಯಾಗಿ ಬಳಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಆರೋಪ ಮಾಡಿದ್ದಾರೆ.

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಸಾಗರ ಗಡಿಯನ್ನು ಕಾಯಲು ನಿಯೋಜಿಸಿದ್ದ ಈ ವಿಶೇಷ ಹಡಗನ್ನು ವಾಪಸ್ ಕರೆಸಿಕೊಂಡು 10 ದಿನಗಳ ಕಾಲ ಗಾಂಧಿ ಕುಟುಂಬದ ಸೇವೆಗಾಗಿ ಬಳಸಿಕೊಳ್ಳಲಾಗಿತ್ತು. ಐಎಎಫ್ ಹೆಲಿಕಾಪ್ಟರ್ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಈ ಅವಧಿಯಲ್ಲಿ ಕುಟುಂಬದ ಸೇವೆಗಾಗಿ ಬಳಸಲಾಗಿತ್ತು ಎಂದು ಆರೋಪಿಸಿದರು.

ನಂಬರ್ ವನ್ ಭ್ರಷ್ಟಾಚಾರಿಯಾಗಿಯೇ ರಾಜೀವ್‌ ಗಾಂಧಿ ಕೊನೆಯುಸಿರೆಳೆದರು ಎಂದು ಇತ್ತೀಚೆಗೆ ಮೋದಿ ವಾಗ್ದಾಳಿ ನಡೆಸಿದ್ದರು. ಮೋದಿ ರಕ್ಷಣಾ ಪಡೆಗಳನ್ನು ವೈಯಕ್ತಿಕ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಯಾಗಿ ಮೋದಿ ಹೊಸ ಆರೋಪ ಮಾಡಿದ್ದಾರೆ.

ಐಎನ್‌ಎಸ್ ವಿರಾಟ್‌ನಲ್ಲಿ ರಾಜೀವ್‌ ಗಾಂಧಿಯವರ ಜತೆ ಇಟಲಿಯಿಂದ ಬಂದಿದ್ದ ಅವರ ಭಾವಂದಿರು ಇದ್ದರು. ಇಲ್ಲಿ ಪ್ರಶ್ನೆ ಎಂದರೆ ವಿದೇಶದಿಂದ ಬಂದವರನ್ನು ಯುದ್ಧನೌಕೆಯಲ್ಲಿ ಕರೆದೊಯ್ಯುವ ಮೂಲಕ ದೇಶದ ಭದ್ರತೆಯ ಜತೆ ರಾಜಿ ಮಾಡಿಕೊಳ್ಳಲಾಗಿದೆಯೇ ಎನ್ನುವುದು... ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News