ಎಡವಿದ ಡೆಲ್ಲಿ ಕ್ಯಾಪಿಟಲ್ಸ್: ಚೆನ್ನೈಸೂಪರ್ ಕಿಂಗ್ಸ್ ಫೈನಲ್‌ಗೆ

Update: 2019-05-10 18:07 GMT

ವಿಶಾಖಪಟ್ಟಣ, ಮೇ 11:ಐಪಿಎಲ್ ಟ್ವೆಂಟಿ-20 ಟೂರ್ನಿಯ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6   ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿದೆ.

  ಗೆಲುವಿಗೆ 148 ರನ್ ಗಳಿಸಬೇಕಿದ್ದ ಚೆನ್ನೈ ತಂಡಕ್ಕೆ ಆರಂಭಿಕ ದಾಂಡಿಗರಾದ ಶೇನ್ ವಾಟ್ಸನ್ ಮತ್ತು ಎಫ್ ಡು ಪ್ಲೆಸಿಸ್ ಅರ್ಧಶತಕಗಳ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ನೆರವಾದರು. ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ ಚೆನ್ನೈ 4ವಿಕೆಟ್ ನಷ್ಟದಲ್ಲಿ 151 ರನ್ ಗಳಿಸುವ ಮೂಲಕ 8ನೇ ಬಾರಿ ಫೈನಲ್ ಪ್ರವೇಶಿಸಿದೆ.

      ವಾಟ್ಸನ್ 50 ರನ್ (32ಎ,3ಬೌ, 4ಸಿ) ಮತ್ತು ಎಫ್ ಡು ಪ್ಲೆಸಿಸ್ 50ರನ್(39ಎ, 7ಬೌ,1ಸಿ) ಗಳಿಸಿ ನಿರ್ಗಮಿಸಿದರು. ಸುರೇಶ್ ರೈನಾ 11ರನ್, ಧೋನಿ 9 ರನ್ ಗಳಿಸಿದರು. ಅಂಬಟಿ ರಾಯುಡು ಔಟಾಗದೆ 20 ರನ್ ಮತ್ತು ಡ್ವೇಯ್ನೆ ಬ್ರಾವೋ ಔಟಾಗದೆ 4 ರನ್ ಗಳಿಸುವ ಮೂಲಕ ಚೆನ್ನೈ ತಂಡವನ್ನು ಫೈನಲ್‌ಗೆ ತಲುಪಿಸಿದರು.

ಡೆಲ್ಲಿ 147/9: ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News