ಗೂಗಲ್ ‘ಡೂಡಲ್’ ಮೂಲಕ ಗೌರವ ಸಲ್ಲಿಸಿದ ಉಮರ್ ಖಯ್ಯಾಮ್ ಬಗ್ಗೆ ನಿಮಗೆಷ್ಟು ಗೊತ್ತು ?

Update: 2019-05-19 06:59 GMT

ಹೊಸದಿಲ್ಲಿ, ಮೇ 18: ಪರ್ಷಿಯಾದ ಗಣಿತ ಶಾಸ್ತ್ರಜ್ಞ ಉಮರ್ ಖಯ್ಯಾಮ್ ಅವರ 971ನೆ ಜನ್ಮ ದಿನವಾದ ಶನಿವಾರ ಗೂಗಲ್ ಸೃಜನಶೀಲ ಹಾಗೂ ವಿಶೇಷ ಡೂಡಲ್ ಅರ್ಪಿಸಿದೆ.

ವರ್ಗೀಕರಣ ಹಾಗೂ ಘನ ಸಮೀಕರಣದ ಪರಿಹಾರಕ್ಕೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಉಮರ್ ಖಯ್ಯಾಮ್ ಜನಪ್ರಿಯರಾಗಿದ್ದಾರೆ.

ಗಣಿತ ಕೌಶಲ ಅಲ್ಲದೆ ಅವರು ಜನಪ್ರಿಯ ಖಗೋಳಶಾಸ್ತ್ರಜ್ಞ ಹಾಗೂ ಕವಿಯಾಗಿದ್ದರು. ಈಶಾನ್ಯ ಇರಾನ್‌ನ ನಿಶಾಪುರದಲ್ಲಿ ಜನಿಸಿದ ಖಯ್ಯಾಮ್  ತನ್ನ ಜೀವನದ ಬಹು ಭಾಗವನ್ನು ರಾಜರ ಆಸ್ಥಾನದಲ್ಲೇ ಕಳೆದರು.

2012ರಲ್ಲಿ ಖಯ್ಯಾಮ್  ಅವರ 964ನೇ ಜನ್ಮ ದಿನದಂದು ಕೂಡ ಗೂಗಲ್ ವಿಶೇಷ ಡೂಡಲ್ ರೂಪಿಸಿತ್ತು. ಇದನ್ನು ಬಳಕೆದಾರರು ಉತ್ತಮವಾಗಿ ಸ್ವೀಕರಿಸಿದ್ದರು. ಈ ಡೂಡಲ್ ಭಾರತವಲ್ಲದೆ ರಶ್ಯಾ, ಮದ್ಯಪ್ರಾಚ್ಯ, ಉತ್ತರ ಆಫ್ರಿಕಾ ದೇಶಗಳು, ಅಮೆರಿಕ ಹಾಗೂ ಚಿಲಿಯ ಗೂಗಲ್ ಬಳಕೆದಾರರಿಗೆ ಕಾಣಿಸಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News