ಬ್ರಹ್ಮಾವರದಲ್ಲಿ ಬಾನುಲಿ ಧ್ವನಿಮುದ್ರಣ ಕೇಂದ್ರ ಸ್ಥಾಪನೆಯಾಗಲಿ

Update: 2019-05-19 18:08 GMT

ಮಾನ್ಯರೇ,
 
ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಕಲಾವಿದರು, ಸಾಧಕರು, ಪ್ರಗತಿಪರ ಕೃಷಿಕರು, ಕವಿಗಳು, ಸಾಹಿತಿಗಳು, ಸಂದರ್ಶನ, ಕವಿಗೋಷ್ಠಿ, ಸಾಂಸ್ಕೃತಿಕ, ಮೊದಲಾದ ಕಾರ್ಯಕ್ರಮವನ್ನು ನೀಡಲು ಮಂಗಳೂರು ಆಕಾಶವಾಣಿಗೆ ದೂರದ ಮಂಗಳೂರು ಕದ್ರಿಯಲ್ಲಿರುವ ಬಾನುಲಿ ಕೇಂದ್ರಕ್ಕೆ ಹೋಗಬೇಕು. ಹೋಗಿ ಬರಲು ಇಡೀ ದಿನದ ಸಮಯವನ್ನು ಇಲ್ಲಿಯವರು ವ್ಯಯಿಸಬೇಕಾಗುತ್ತದೆ. ನೇರಪ್ರಸಾರ ಕಾರ್ಯಕ್ರಮಗಳಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕಾಗುತ್ತದೆ. ಪ್ರಯಾಣದ ಹಾದಿಯಲ್ಲಿ ವಾಹನ ದಟ್ಟಣೆ, ಬಸ್ಸು ಬದಲಾವಣೆ, ವಿಳಾಸ ವಿಚಾರಣೆ, ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಿಲಯದ ನಿರ್ದೇಶಕರು, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಬ್ರಹ್ಮಾವರದಲ್ಲಿ ಉಡುಪಿ ಜಿಲ್ಲೆಯ ಕಲಾವಿದರಿಗೆ ಕಾರ್ಯಕ್ರಮ ಪ್ರಸ್ತುತಿ ಪಡಿಸಲು ಸುಲಭವಾಗುವಂತೆ, ಮಂಗಳೂರು ಆಕಾಶವಾಣಿಯ ಉಪ ಧ್ವನಿಮುದ್ರಣ ಕೇಂದ್ರ ಸ್ಥಾಪಿಸಿದಲ್ಲಿ ಉಡುಪಿಯ ಜನತೆಗೆ ಅನುಕೂಲವಾಗುತ್ತದೆ. ಅಲ್ಲದೆ ಈ ಭಾಗದ ಹೆಚ್ಚಿನ ಕಾರ್ಯಕ್ರಮವು ಪ್ರಸಾರವಾಗಲು ಸಾಧ್ಯವಾಗುತ್ತದೆ. ಸಕಲ ಕಲಾವಿದರಿಗೂ ವೇದಿಕೆ ಸುಲಭವಾಗಿ ದೊರೆಯುತ್ತದೆ. ಈ ಸಮಸ್ಯೆಗೆ ಅಗತ್ಯವಾಗಿ ಪರಿಹಾರ ದೊರಕಿಸಲು ಸಂಬಂಧಪಟ್ಟವರಿಂದ ಪ್ರಯತ್ನಗಳು ನಡೆಯಲಿ.

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News