×
Ad

ಲೋಕಸಭಾ ಚುನಾವಣೆ ಸಂದರ್ಭ 909 ಪೋಸ್ಟ್‌ಗಳನ್ನು ತೆಗೆದುಹಾಕಿದ ಸಾಮಾಜಿಕ ಮಾಧ್ಯಮ: ಚು.ಆಯೋಗ

Update: 2019-05-20 22:36 IST

ಹೊಸದಿಲ್ಲಿ, ಮೇ.20: ಇತ್ತೀಚೆಗೆ ಕೊನೆಗೊಂಡ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳು 909 ಪೋಸ್ಟ್‌ಗಳನ್ನು ತೆಗೆದು ಹಾಕಿವೆ ಎಂದು ಚು.ಆಯೋಗದ ಪ್ರಧಾನ ನಿರ್ದೇಶಕ (ಸಂವಹನ)ಧೀರೇಂದ್ರ ಓಜಾ ತಿಳಿಸಿದ್ದಾರೆ.

 ಫೇಸ್‌ಬುಕ್ 650 ಪೋಸ್ಟ್‌ಗಳನ್ನು ತೆಗೆದು ಹಾಕಿದರೆ ಟ್ವಿಟರ್ 220, ಶೇರ್‌ಚ್ಯಾಟ್ 31, ಯೂಟ್ಯೂಬ್ ಐದು ಮತ್ತು ವಾಟ್ಸ್‌ಆ್ಯಪ್ ಮೂರು ಪೋಸ್ಟ್‌ಗಳನ್ನು ತೆಗೆದುಹಾಕಿದೆ ಎಂದು ಅವರು ವಿವರಿಸಿದ್ದಾರೆ. 909 ಪೋಸ್ಟ್‌ಗಳಲ್ಲಿ 73 ಪೋಸ್ಟ್‌ಗಳು ರಾಜಕೀಯ ಜಾಹೀರಾತುಗಳಾಗಿದ್ದು ಮತದಾನಕ್ಕೆ 48 ಗಂಟೆಗಳಿರುವಾಗ ಹಾಕಲಾಗಿತ್ತು.

ಎರಡು ಪೋಸ್ಟ್‌ಗಳು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದರೆ43 ಪೋಸ್ಟ್‌ಗಳು ಮತದಾರರಿಗೆ ತಪ್ಪು ಮಾಹಿತಿ ನೀಡುವಂತಿದ್ದವು. ಇನ್ನು 28 ಪೋಸ್ಟ್‌ಗಳು ಸಭ್ಯತೆಯ ಎಲ್ಲೆ ಮೀರಿದ್ದರೆ 11 ಮತದಾನೋತ್ತರ ಸಮೀಕ್ಷೆಗಳಾಗಿದ್ದವು ಮತ್ತು 11 ದ್ವೇಷ ಹರಡುವಂತಿದ್ದವು ಎಂದು ಓಜಾ ತಿಳಿಸಿದ್ದಾರೆ. ಒಟ್ಟಾರೆಯಾಗಿ 647 ಪಾವತಿ ಸುದ್ದಿಗಳಾಗಿದ್ದು ಏಳನೇ ಹಂತದಲ್ಲಿ 57 ಪಾವತಿ ಸುದ್ದಿಗಳನ್ನು ಪೋಸ್ಟ್ ಮಾಡಲಾಗಿತ್ತು. ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಅವಧಿಯಲ್ಲಿ ಒಟ್ಟು 1,297 ಪಾವತಿ ಸುದ್ದಿಗಳನ್ನು ಹಾಕಲಾಗಿತ್ತು ಎಂದು ಓಜಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News