ಎರಡನೇ ದಲಿತ ಸಿಜೆಐ ಆಗುವ ಅವಕಾಶ ಪಡೆದ ನ್ಯಾ. ಗವಾಯ್

Update: 2019-05-22 17:28 GMT

ಹೊಸದಿಲ್ಲಿ, ಮೇ 22: ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ. ಬಿಆರ್ ಗವಾಯ್ ಸಹಿತ ನಾಲ್ವರು ನ್ಯಾಯಾಧೀಶರ ಪದೋನ್ನತಿಗೆ ಸರಕಾರ ಬುಧವಾರ ಅಂಗೀಕಾರ ನೀಡಿದೆ. ಇದರೊಂದಿಗೆ ನ್ಯಾ. ಗವಾಯ್ ದೇಶದ ಎರಡನೇ ದಲಿತ ಮುಖ್ಯ ನ್ಯಾಯಾಧೀಶ(ಸಿಜೆಐ)ರಾಗುವ ಅವಕಾಶ ಒದಗಿ ಬಂದಿದೆ.

2007ರಲ್ಲಿ ಸಿಜೆಐ ಆಗಿದ್ದ ನ್ಯಾ. ಕೆಜಿ ಬಾಲಕೃಷ್ಣನ್ ಪ್ರಪ್ರಥಮ ದಲಿತ ಸಿಜೆಐ ಆಗಲಿದ್ದಾರೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯ್, ಸೂರ್ಯಕಾಂತ್, ಅನಿರುದ್ಧ ಬೋಸ್ ಮತ್ತು ಎಎಸ್ ಬೋಪಣ್ಣ ಇವರ ಪದೋನ್ನತಿಗೆ ಸರಕಾರ ಅಂಗೀಕಾರ ನೀಡಿದೆ. ಈ ಮೊದಲು ಸೇವಾ ಹಿರಿತನ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಕಾರಣ ನೀಡಿ ಸರಕಾರ ನ್ಯಾ. ಬೋಸ್ ಮತ್ತು ಬೋಪಣ್ಣರ ಹೆಸರನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ಸೂಚಿಸಿತ್ತು. ನ್ಯಾ. ಬೋಸ್ ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದರೆ, ನ್ಯಾ. ಬೋಪಣ್ಣ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು.

ನ್ಯಾ. ಗವಾಯ್ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರೆ, ನ್ಯಾ. ಕಾಂತ್ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News