ಟ್ವಿಟರ್ ಖಾತೆಯ ಹೆಸರಿನಿಂದ ‘ಚೌಕೀದಾರ್’ ಪದ ತೆಗೆದ ಮೋದಿ

Update: 2019-05-23 12:54 GMT

ಹೊಸದಿಲ್ಲಿ, ಮೇ 23: ಈ ಬಾರಿಯ ಚುನಾವಣೆಯಲ್ಲಿ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ‘ಮೈ ಭೀ ಚೌಕೀದಾರ್’ ಅಭಿಯಾನವು ಬಿಜೆಪಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯ ಹೆಸರಿನಲ್ಲಿದ್ದ ‘ಚೌಕಿದಾರ್’ ಪದವನ್ನು ತೆಗೆಯಲಾಗಿದೆ.

ಈ ಬಗ್ಗೆ ಸ್ವತಃ ಮೋದಿಯವರೇ ಟ್ವೀಟ್ ಮಾಡಿದ್ದು, “ಭಾರತದ ಜನರು ಚೌಕೀದಾರ್ ಗಳಾದರು ಮತ್ತು ದೇಶಕ್ಕೆ ಸೇವೆ ಸಲ್ಲಿಸಿದರು. ಭಾರತವನ್ನು ಜಾತೀಯತೆ, ಕೋಮುವಾದ, ಭ್ರಷ್ಟಾಚಾರಗಳಂತಹ ಕೆಟ್ಟ ವಿಷಯಗಳಿಂದ ಭಾರತವನ್ನು ರಕ್ಷಿಸಲು ಚೌಕಿದಾರ್ ಶಕ್ತಿಶಾಲಿ ಸಂಕೇತವಾಗಿದೆ” ಎಂದಿದ್ದರು.

ನಂತರ ಮತ್ತೊಂದು ಟ್ವೀಟ್ ಮಾಡಿದ ಅವರು, “ಚೌಕಿದಾರ್ ಹುಮ್ಮಸ್ಸನ್ನು ಇನ್ನೊಂದು ಹಂತಕ್ಕೊಯ್ಯುವ ಸಮಯವೀಗ ಬಂದಿದೆ. ಸ್ಫೂರ್ತಿಯನ್ನು ಪ್ರತಿ ಕ್ಷಣ ಜೀವಂತವಾಗಿರಿಸಿ ಮತ್ತು ಭಾರತದ ಅಭಿವೃದ್ಧಿಗೆ ಕೆಲಸ ಮಾಡಿ. ನನ್ನ  ಟ್ವಿಟರ್ ನಿಂದ ಚೌಕಿದಾರ್ ಪದ ಹೋಗುತ್ತದೆ ಆದರೆ ಅದು ನನ್ನೊಳಗಿನ ಅವಿಭಾಜ್ಯ ಅಂಗವಾಗಿರುತ್ತದೆ. ನೀವು ಕೂಡ ಇದನ್ನು ಮಾಡಿ ಎಂದು ಕೇಳಿಕೊಳ್ಳುತ್ತೇನೆ!” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News