ರಾಬರ್ಟ್ ವಾದ್ರಾ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಜಾರಿ ನಿರ್ದೇಶನಾಲಯ

Update: 2019-05-24 16:24 GMT

ಹೊಸದಿಲ್ಲಿ, ಮೇ 24: ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರಾ ಅವರಿಗೆ ನೀಡಿದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದೆ.

ಎಪ್ರಿಲ್ 1ರಂದು ವಿಚಾರಣಾ ನ್ಯಾಯಾಲಯ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ರಾಬರ್ಟ್ ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದು ತನಿಖೆಯ ಉದ್ದೇಶಕ್ಕೆ ಹಾನಿ ಉಂಟು ಮಾಡಬಹುದು ಎಂದು ಜಾರಿ ನಿರ್ದೇಶನಾಲಯ ಪರ ವಕೀಲ ಡಿ.ಪಿ. ಸಿಂಗ್ ಮನವಿಯಲ್ಲಿ ಹೇಳಿದ್ದಾರೆ. ರಾಬರ್ಟ್ ವಾದ್ರಾ ಅಲ್ಲದೆ, ಅವರ ನಿಕಟ ಸಹವರ್ತಿಯಾಗಿರುವ ಮನೋಜ್ ಅರೋರಾ ಅವರಿಗೆ ಕೂಡಾ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದೆ.

 ಲಂಡನ್‌ನ ಬ್ರಾನ್‌ಸ್ಟನ್ ಸ್ಕ್ವಾರ್‌ನಲ್ಲಿ 1.9 ದಶಲಕ್ಷ ಪೌಂಡ್ ವೌಲ್ಯದ ಸೊತ್ತು ಖರೀದಿಸಿದ ಆರೋಪವನ್ನು ರಾಬರ್ಟ್ ವಾದ್ರಾ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News