2021ರ ವಿಧಾನ ಸಭೆ ಚುನಾವಣೆ ಮೇಲೆ ಕಣ್ಣಿರಿಸಿದ ಸ್ಟಾಲಿನ್

Update: 2019-05-24 16:26 GMT

ಚೆನ್ನೈ, ಮೇ 24: 38 ಸ್ಥಾನ (ತಮಿಳುನಾಡಿನಲ್ಲಿ ಒಟ್ಟು 39 ಲೋಕಸಸಭಾ ಕ್ಷೇತ್ರಗಳಿವೆ. ಆದರೆ, ವೆಲ್ಲೂರು ಕ್ಷೇತ್ರದ ಚುನಾವಣೆ ನಡೆದಿಲ್ಲ.) ಗಳಲ್ಲಿ 37 ಸ್ಥಾನಗಳನ್ನು ಪಡೆಯುವ ಮೂಲಕ ಡಿಎಂಕೆ ಗಮನಾರ್ಹ ಸಾಧನೆ ತೋರಿದೆ. ಆದರೆ, ವಿಧಾನ ಸಭೆ ಉಪ ಚುನಾವಣೆಯ ಒಟ್ಟು 22 ಸ್ಥಾನಗಳಲ್ಲಿ ಕೇವಲ 13 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ವರಿಷ್ಠ ಸ್ಟಾಲಿನ್ 2021ರಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.

ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದರೂ ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ರಚಿಸಲು ಸಾಧ್ಯವಾಗಲಾರದು. ಯಾಕೆಂದರೆ ಅದರ ಪ್ರತಿಪಕ್ಷವಾದ ಎಐಎಡಿಎಂಕೆ ಉಪ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ರಾಜ್ಯ ವಿಧಾನ ಸಭೆಯಲ್ಲಿ ಎಐಎಡಿಎಂಕೆಯ ಸದಸ್ಯರ ಸಂಖ್ಯೆ 123 ಆಗಿದೆ. ಬಹುಮತಕ್ಕೆ ಬೇಕಾಗಿರುವುದು 118 ಸದಸ್ಯರ ಬೆಂಬಲ. ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಆದರೆ, ಈ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 1 ಸ್ಥಾನ ಗೆಲ್ಲುವಲ್ಲಿ ಮಾತ್ರ ಸಫಲವಾಯಿತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 350 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಸಂದರ್ಭ ಎಐಎಡಿಎಂಕೆ ದೊರಕಿದ ಜನರ ತೀರ್ಪು ವ್ಯತಿರಿಕ್ತವಾಗಿದೆ.

ತಮಿಳುನಾಡಿನಲ್ಲಿ ನಗದು ನಿಷೇಧ, ಜಿಎಸ್‌ಟಿ, ಕೇಂದ್ರದ ಕೆಲವು ಯೋಜನೆಗಳು ಸಹಿತ ಎಐಎಡಿಎಂಕೆಯ ಸಾಧನೆಯ ವಿಫಲತೆ ಪರಿಣಾಮ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಡಿಎಂಕೆಯ ಮಿತ್ರ ಪಕ್ಷಗಳಾದ ಸಿಪಿಐ (ಎಂ) ಹಾಗೂ ಸಿಪಿಐ ಕೂಡ ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News