ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್‌ಗೆ ಲುಕ್-ಔಟ್ ನೊಟೀಸ್ ಜಾರಿ
Update: 2019-05-26 12:20 IST
ಹೊಸದಿಲ್ಲಿ, ಮೇ 26: ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ವಲಸೆ ಕಚೇರಿಯು ಲುಕ್‌ಔಟ್ ನೊಟೀಸ್ ಜಾರಿ ನೀಡಿದ್ದು, ಈ ನೋಟಿಸ್‌ಗೆ ಮೇ 23,2020ರ ತನಕ ಮಾನ್ಯತೆಯಿದೆ.
ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕುಮಾರ್ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರು ವಿಏರ್‌ಪೋರ್ಟ್ ಅಥವಾ ಭೂ ಬಂದರಿನಿಂದ ದೇಶದಿಂದ ಪರಾರಿಯಾಗಲು ಯತ್ನಿಸಿದರೆ ಅವರನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ರ್ಯಾಲಿ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪಶ್ಚಿಮಬಂಗಾಳದ ಸಿಐಡಿಯ ಎಡಿಜಿ ಹುದ್ದೆಯಿಂದ ಕುಮಾರ್‌ರನ್ನು ಕೆಳಗಿಳಿಸಿತ್ತು. ಇದೀಗ ಅವರು ದಿಲ್ಲಿಯ ಗೃಹ ವ್ಯವಹಾರ ಸಚಿವಾಲಯದಲ್ಲಿ ಅಧಿಕಾರಿಯಾಗಿದ್ದಾರೆ.