25 ವರ್ಷದ ಇಂಜಿನಿಯರ್ ದೇಶದ ಅತ್ಯಂತ ಕಿರಿಯ ಸಂಸದೆ

Update: 2019-05-26 08:13 GMT

ಹೊಸದಿಲ್ಲಿ, ಮೇ 26: ಒಡಿಶಾದ 25ರ ಹರೆಯದ ಇಂಜಿನಿಯರಿಂಗ್ ಪದವೀಧರೆ 17ನೇ ಲೋಕಸಭೆಗೆ ಆಯ್ಕೆಯಾಗಿ ಬಂದಿರುವ ಅತ್ಯಂತ ಕಿರಿಯ ವಯಸ್ಸಿನ ಸಂಸತ್ ಸದಸ್ಯೆಯಾಗಿದ್ದಾರೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕಿಯೊಂಜಾರ್ ಕ್ಷೇತ್ರದಿಂದ ಆಯ್ಕೆಯಾಗಿರುವ ಚಂದ್ರಾನಿ ಮುರ್ಮು ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದೆಯಾಗಿದ್ದಾರೆ.

 ಮುರ್ಮು ಬಿಜು ಜನತಾದಳ(ಬಿಜೆಡಿ) ಅಭ್ಯರ್ಥಿಯಾಗಿ  ಕಿಯೊಂಜಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈಕೆಯ ವಯಸ್ಸು 25 ವರ್ಷ, 11 ತಿಂಗಳು, 9 ದಿನ.

  ಮುರ್ಮು ಬಿಜೆಪಿಯ ಎರಡು ಬಾರಿಯ ಸಂಸದ ಅನಂತ ನಾಯಕ್‌ರನ್ನು 66,203 ಮತಗಳಿಂದ ಸೋಲಿಸಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಕಿಯೊಂಜಾರ್ ಲೋಕಸಭಾ ಕ್ಷೇತ್ರದಲ್ಲಿ 9ನೇ ಬಾರಿ ಕಾಂಗ್ರೆಸ್‌ಯೇತರ ಸಂಸದರು ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆರು ಬಾರಿ ಗೆದ್ದಿತ್ತು. 1998ರಿಂದ 2004ರ ತನಕ ಬಿಜೆಡಿಯೊಂದಿಗಿನ ಮೈತ್ರಿಯ ಬೆಂಬಲದಿಂದ ಬಿಜೆಪಿ ಮೂರು ಬಾರಿ ಈ ಕ್ಷೇತ್ರವನ್ನು ಗೆದ್ದುಕೊಂಡಿತ್ತು.

ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಮುರ್ಮುಗೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿತ್ತು.

‘‘ತನ್ನ ಸಂಸತ್ ಕ್ಷೇತ್ರದಲ್ಲಿ ಉದ್ಯೋಗವನ್ನು ಸೃಷ್ಟಿಸುವುದು ತನ್ನ ಮುಂದಿರುವ ಪ್ರಮುಖ ಗುರಿ. ಖನಿಜ ಸಮೃದ್ಧ ಕ್ಷೇತ್ರದಲ್ಲಿ ನಿರುದ್ಯೋಗ ಬಿಕ್ಕಟ್ಟು ಉಲ್ಬಣಿಸಿದೆ. ನಾನು ಕೇಂದ್ರದಲ್ಲಿ ಯುವಕರು ಹಾಗೂ ಮಹಿಳೆಯರನ್ನು ಪ್ರತಿನಿಧಿಸುತ್ತೇನೆ’’ ಎಂದು ಮುರ್ಮು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News