ಫ್ರೆಂಚ್ ಓಪನ್: ನಡಾಲ್ ಗೆಲುವಿನ ಆರಂಭ

Update: 2019-05-27 18:24 GMT

ಪ್ಯಾರಿಸ್, ಮೇ 27: ‘ಕ್ಲೇ ಕೋರ್ಟ್ ಕಿಂಗ್’ ಖ್ಯಾತಿಯ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ ಜರ್ಮನಿಯ ಕ್ವಾಲಿಫೈಯರ್ ಯಾನಿಕ್ ಹ್ಯಾನ್‌ಮನ್‌ರನ್ನು 6-2, 6-1, 6-3 ಸೆಟ್‌ಗಳಿಂದ ಮಣಿಸಿದ್ದಾರೆ.

11 ಬಾರಿ ಚಾಂಪಿಯನ್ ಆಗಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಇನ್ನೋರ್ವ ಕ್ವಾಲಿಫೈಯರ್ ಆಟಗಾರನನ್ನು ಎದುರಿಸಲಿದ್ದಾರೆ.

ನಡಾಲ್ ತನ್ನ ನೆಚ್ಚಿನ ಮೈದಾನದಲ್ಲಿ ಸಾಮಾನ್ಯವಾಗಿ ನಿಧಾನಗತಿಯ ಆರಂಭ ಪಡೆಯುತ್ತಾರೆ. ಇಂದು ಅವರು ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಅನಗತ್ಯ ತಪ್ಪನ್ನು ಕಡಿಮೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News