×
Ad

ಮುಝಫ್ಫರ್‌ನಗರ ಗಲಭೆ ಪ್ರಕರಣ: 12 ಮಂದಿಯ ಖುಲಾಸೆ

Update: 2019-05-29 22:37 IST

ಲಕ್ನೊ, ಮೇ 29: 2003ರಲ್ಲಿ ನಡೆದಿದ್ದ ಮುಝಫ್ಫರ್‌ನಗರ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 12 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.

2013ರ ಸೆಪ್ಟೆಂಬರ್ 7ರಂದು ಮುಝಫ್ಫರ್‌ನಗರದ ಲಿಸಾದ್ ಜಿಲ್ಲೆಯಲ್ಲಿ ಗುಂಪೊಂದು ಕೆಲವು ಮನೆಗಳಿಗೆ ಬೆಂಕಿ ಹಚ್ಚಿ ಆಸ್ತಿಯನ್ನು ಲೂಟಿ ಮಾಡಿತ್ತು ಎಂಬ ದೂರಿನಂತೆ ವಿಶೇಷ ತನಿಖಾ ತಂಡವು 13 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 436 (ಬೆಂಕಿ ಹಚ್ಚುವುದು), ಸೆಕ್ಷನ್ 395 (ಡಕಾಯತಿ) ರಡಿ ಪ್ರಕರಣ ದಾಖಲಿಸಿತ್ತು. ಇವರಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದ.

ವಿಚಾರಣೆಯ ಸಂದರ್ಭ ದೂರುದಾರ ಮುಹಮ್ಮದ್ ಸುಲೇಮಾನ್ ಸಹಿತ ಮೂವರು ಪ್ರತಿಕೂಲ ಸಾಕ್ಷಿಗಳಾಗಿ ಪರಿವರ್ತನೆಯಾಗಿ ಫಿರ್ಯಾದಿ ಪಕ್ಷಕ್ಕೆ ನೆರವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಕುಮಾರ್ ಖುಲಾಸೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News