ಅಸ್ಸಾಂ: 30 ವರ್ಷ ಸೇವೆ ಸಲ್ಲಿಸಿದ ನಿವೃತ್ತ ಯೋಧನನ್ನು ವಲಸಿಗ ಎಂದು ಬಂಧಿಸಿದರು !

Update: 2019-05-29 18:17 GMT

ಗುವಹಾಟಿ, ಮೇ.29: ಭಾರತೀಯ ಸೇನೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ನಿವೃತ್ತ ಅಸ್ಸಾಂ ಯೋಧನನ್ನು ವಲಸಿಗ ಎಂಬ ನೆಲೆಯಲ್ಲಿ ಪೊಲೀಸರು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ವಲಸೆಯನ್ಛ್ನು ತಡೆಯಲು ರಚಿಸಲಾಗಿರುವ ಕಾನೂನಿನ ಆಧಾರದಲ್ಲಿ ಪೊಲೀಸರು ಈ ಬಂಧನ ನಡೆಸಿದ್ದಾರೆ. 2017ರವರೆಗೆ ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದ ಮತ್ತು ಕಾಶ್ಮೀರ ಮತ್ತು ಮಣಿಪುರದಲ್ಲಿ ಉಗ್ರರ ಜೊತೆ ಹೋರಾಡಿದ್ದ 53ರ ಹರೆಯದ ಮುಹಮ್ಮದ್ ಸನಾವುಲ್ಲ ಅವರನ್ನು ಬುಧವಾರ ಬಂಧಿಸಲಾಗಿದ್ದು ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಸೇನೆಯಿಂದ ನಿವೃತ್ತಿಯ ಬಳಿಕ ಸನಾವುಲ್ಲ ಅಸ್ಸಾಂ ಗಡಿ ಪೊಲೀಸ್ ಪಡೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ವಿಭಾಗವು ಪ್ರಮುಖವಾಗಿ ಅಕ್ರಮ ವಲಸಿಗರ ಪತ್ತೆ ಕಾರ್ಯ ಮಾಡುತ್ತದೆ. ಇದೀಗ ಅದೇ ವಿಭಾಗ ಸನಾವುಲ್ಲ ಅವರು ಅಕ್ರಮ ನಿವಾಸಿ ಎಂದು ಆರೋಪಿಸಿದೆ. ಓರ್ವ ನಿವೃತ್ತ ಯೋಧನಿಗೆ ಈ ರೀತಿಯಾಗಬಹುದಾದರೆ ಇನ್ನು ಎನ್‌ಆರ್‌ಸಿಯಲ್ಲಿ ವಾಸ್ತವದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಧಾನಿ ಮೋದಿ ಪರಿಶೀಲಿಸಬೇಕು ಎಂದು ಸನಾವುಲ್ಲ ಅವರ ಪುತ್ರ ಶಾಹಿದ್ ಅಖ್ತರ್ ಮನವಿ ಮಾಡಿದ್ದಾರೆ. ಸದ್ಯ ಸನಾವುಲ್ಲ ಅವರು ಕಾನೂನಾತ್ಮಕವಾಗಿ ಭಾರತೀಯರು ಎಂಬುದನ್ನು ಸಾಬೀತುಪಡಿಸಲು ಅವರ ಕುಟುಂಬ ಕಾನೂನು ಹೋರಾಟಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News