ಬ್ರೆಝಿಲ್: ಪೊಲೀಸರ ಬೃಹತ್ ಕೊಲೆ ನಿಗ್ರಹ ಕಾರ್ಯಾಚರಣೆ

Update: 2019-05-29 18:38 GMT

ಸಾವೊ ಪೌಲೊ (ಬ್ರೆಝಿಲ್), ಮೇ 29: ಬ್ರೆಝಿಲ್ ಪೊಲೀಸರು ಮಂಗಳವಾರ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಬೃಹತ್ ‘ಕೊಲೆ-ನಿಗ್ರಹ’ ಕಾರ್ಯಾಚರಣೆಯನ್ನು ನಡೆಸಿದರು ಹಾಗೂ ಒಂದೇ ದಿನದಲ್ಲಿ 968 ಶಂಕಿತರನ್ನು ಬಂಧಿಸಿದರು ಎಂದು ನ್ಯಾಶನಲ್ ಕೌನ್ಸಿಲ್ ಆಫ್ ಸಿವಿಲಿಯನ್ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಬಂಧಿತರಲ್ಲಿ 56 ಮಂದಿ ಗೃಹ ಹಿಂಸೆ ಅಥವಾ ಲಿಂಗಾಧಾರಿತ ತಾರತಮ್ಯ ಪ್ರಕರಣಗಳಲ್ಲಿ ಭಾಗಿಯಾದವರು.

ಇದು ಬೃಹತ್ ‘ಆಪರೇಶನ್ ಕ್ರೋನೊಸ್’ನ ಎರಡನೇ ಹಂತದ ಕಾರ್ಯಾಚರಣೆಯಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಮೊದಲನೇ ಹಂತದ ‘ಆಪರೇಶನ್ ಕ್ರೋನೊಸ್’ನಲ್ಲಿ ಕೊಲೆ, ಲಿಂಗಾಧಾರಿತ ತಾರತಮ್ಯ ಹತ್ಯೆಗಳು ಮತ್ತು ಗೃಹ ಹಿಂಸೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಸುಮಾರು 3,000 ಮಂದಿಯನ್ನು ಬಂಧಿಸಿದ್ದರು.

ಈ ವರ್ಷದ ಈವರೆಗೆ ಲಿಂಗಾಧಾರಿತ ತಾರತಮ್ಯ ಹಿಂಸಾಚಾರದಲ್ಲಿ ಕನಿಷ್ಠ 126 ಮಹಿಳೆಯರು ಹತ್ಯೆಗೀಡಾಗಿದ್ದಾರೆ ಎಂದು ಇಂಟರ್-ಅಮೆರಿಕನ್ ಕಮಿಶನ್ ಆನ್ ಹ್ಯೂಮನ್ ರೈಟ್ಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News