2020ರಲ್ಲಿ ತಾಜ್‌ಮಹಲನ್ನು ಮೀರಿಸಲಿದೆ ಇಲ್ಲಿನ ತ್ಯಾಜ್ಯ !

Update: 2019-06-04 15:30 GMT

ಹೊಸದಿಲ್ಲಿ, ಜೂ. 4: ಹೊಸದಿಲ್ಲಿಯ ಘಾಝಿಪುರದಲ್ಲಿರುವ ಭಾರತದ ಅತಿ ಎತ್ತರದ ತ್ಯಾಜ್ಯ ಬೆಟ್ಟ 2020ಕ್ಕೆ ತಾಜ್‌ಮಹಲ್‌ಗಿಂತ ಎತ್ತರವಾಗಲಿದೆ. ಹೊಸದಿಲ್ಲಿಯ ಪೂರ್ವ ಭಾಗದ ಘಾಝಿಪುರದಲ್ಲಿ ಎದ್ದು ನಿಂತಿರುವ ಈ ತ್ಯಾಜ್ಯ ಬೆಟ್ಟ ಹದ್ದು, ಬೀಡಾಡಿ ದನಗಳು, ನಾಯಿಗಳ ಆವಾಸ ಸ್ಥಾನವಾಗಿದೆ.

 ಈ ಪ್ರದೇಶ 40 ಫುಟ್‌ಬಾಲ್ ಅಂಗಣದಷ್ಟು ವ್ಯಾಪ್ತಿ ಹೊಂದಿದ್ದು, ಪ್ರತಿವರ್ಷ ತ್ಯಾಜ್ಯ ರಾಶಿ 10 ಮೀಟರ್ ಹೆಚ್ಚಾಗುತ್ತಿದೆ. ‘‘ಈ ತ್ಯಾಜ್ಯ ಬೆಟ್ಟ ಈಗಾಗಲೇ 65 ಮೀಟರ್ ಎತ್ತರವಿದೆ. ಪ್ರಸುತ್ತ ಇರುವ ಏರಿಕೆ ಮುಂದುವರಿದರೆ 2020ರಲ್ಲಿ ಇದು 73 ಮೀಟರ್ ಎತ್ತರ ಇರುವ ತಾಜ್‌ಮಹಲ್ ಅನ್ನು ಮೀರಿಸಲಿದೆ’’ ಎಂದು ಪೂರ್ವ ದಿಲ್ಲಿಯ ಅಧೀಕ್ಷಕ ಎಂಜಿನಿಯರ್ ಅರುಣ್ ಕುಮಾರ್ ಹೇಳಿದ್ದಾರೆ.

ಘಾಝಿಪುರದಲ್ಲಿ ಈ ತ್ಯಾಜ್ಯ ವಿಲೇವಾರಿ ಪ್ರದೇಶವನ್ನು 1984ರಲ್ಲಿ ಆರಂಭಿಸಲಾಗಿತ್ತು. 2002ರಲ್ಲಿ ಆ ಪ್ರದೇಶದ ಸಾಮರ್ಥ್ಯ ಪೂರ್ಣಗೊಂಡಿದ್ದು, ಮುಚ್ಚಬೇಕಿತ್ತು. ಆದರೆ, ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಗರಾಡಳಿತ ತಡೆಗಟ್ಟದೇ ಇರುವುದರಿಂದ ದಿನದಿಂದ ದಿನಕ್ಕೆ ಇಲ್ಲಿನ ತ್ಯಾಜ್ಯ ರಾಶಿ ಹೆಚ್ಚುತ್ತಿದೆ. ಪ್ರತಿದಿನ 2000 ಟನ್‌ಗಳಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ದಿಲ್ಲಿಯ ಮುನ್ಸಿಪಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News