ಉ.ಪ್ರ: ಕುಟುಂಬದ ಎದುರೇ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ

Update: 2019-06-09 18:35 GMT

ಗೋರಖಪುರ,ಜೂ.9: 12ರ ಹರೆಯದ ದಲಿತ ಬಾಲಕಿಯ ಮೇಲೆ ಆರು ಜನರ ಗುಂಪು ಸಾಮೂಹಿಕ ಅತ್ಯಚಾರವೆಸಗಿರುವ ಹೇಯ ಘಟನೆ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಅಹಿರೌಲಿ ಬಾಝಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದ್ದು,ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಇತರ ಇಬ್ಬರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಶುಕ್ರವಾರ ಬೆಳಿಗ್ಗೆ ಚರಂಡಿ ನಿರ್ಮಾಣ ಕುರಿತು ಬಾಲಕಿಯ ಕುಟುಂಬದೊಂದಿಗೆ ಜಗಳವಾಡಿದ್ದರು. ಸಂಜೆ ಬಾಲಕಿಯ ಮನೆಗೆ ನುಗ್ಗಿದ ಆರೋಪಿಗಳು ಕುಟುಂಬ ಸದಸ್ಯರ ಕಣ್ಣೆದುರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕುಟುಂಬದದವರು ವಿರೋಧಿಸಿದಾಗ ಅವರನ್ನು ಥಳಿಸಿದ್ದರು.

ಈ ಬಗ್ಗೆ ಬಾಲಕಿಯ ತಾಯಿ ಶನಿವಾರ ದೂರು ಸಲ್ಲಿಸಿದ್ದು,ರವಿವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News