ಬಸ್ ಮೇಲೇರಿ ಅಪಾಯಕಾರಿಯಾಗಿ ಬಸ್ ಡೇ ಆಚರಿಸಿದ ವಿದ್ಯಾರ್ಥಿಗಳ ಬಂಧನ

Update: 2019-06-18 08:38 GMT

ಚೆನ್ನೈ, ಜೂ.18: ನಗರದಲ್ಲಿ ಸೋಮವಾರ ಬಸ್ ಡೇ ಆಚರಿಸುವ ಅತ್ಯುತ್ಸಾಹದಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಬಸ್ ಟಾಪ್ ಮೇಲೆ ದೊಡ್ಡ ಸಂಖ್ಯೆಯಲ್ಲಿ ಏರಿದ್ದಾರೆ. ಈ ಸಂದರ್ಭ ಬೈಕೊಂದಕ್ಕೆ ಢಿಕ್ಕಿ ಆಗುವುದನ್ನು ತಪ್ಪಿಸಲು ಬಸ್ಸು ಚಾಲಕ ಹಠಾತ್ ಆಗಿ ಬ್ರೇಕ್ ಹಾಕಿದಾಗ 30ರಷ್ಟು ವಿದ್ಯಾರ್ಥಿಗಳು ರಸ್ತೆಗೆ ಬಿದ್ದು ಬಸ್ಸಿನ ಚಕ್ರದಡಿ ಬೀಳುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಈ ಆಘಾತಕಾರಿ ಘಟನೆಯ ವೀಡಿಯೋ ಕೂಡ ವೈರಲ್ ಆಗಿದ್ದು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಬಸ್ ಟಾಪ್ ನಲ್ಲಿ ಕುಳಿತುಕೊಂಡಿದ್ದರೆ ಇನ್ನು ಕೆಲವರು ಕಿಟಿಕಿಯ ರಾಡುಗಳಲ್ಲಿ ನೇತಾಡುತ್ತಿರುವುದೂ ಕಂಡು ಬಂದಿತ್ತು.

ಈ ಘಟನೆಯ ನಂತರ ಚೆನ್ನೈ ಪೊಲೀಸರು ಕನಿಷ್ಠ 20 ವಿದ್ಯಾರ್ಥಿಗಳನ್ನು ತಮ್ಮ ಜೀವ ಹಾಗೂ ಬಸ್ಸಿನ ಪ್ರಯಾಣಿಕರ ಜೀವಕ್ಕೆ ಸಂಚಕಾರ ತಂದಿದ್ದಕ್ಕಾಗಿ ಬಂಧಿಸಿದ್ದಾರೆ.

ಚೆ ವಿದ್ಯಾರ್ಥಿಗಳು ಕಾಲೇಜಿನ ಮೊದಲ ದಿನದಂದು ಚೆನ್ನೈ ಪೊಲೀಸರ ಸತತ ಎಚ್ಚರಿಕೆಯ ಹೊರತಾಗಿಯೂ ಸಾರ್ವಜನಿಕರಿಗೆ ಅನಾನುಕೂಲ ಸೃಷ್ಟಿಸುವ ಈ ಬಸ್ ಡೇ ಆಚರಿಸುತ್ತಿದ್ದಾರೆ.

ಸೋಮವಾರ ನಗರದ ಪಚಯಪ್ಪಾಸ್ ಕಾಲೇಜು ಹಾಗೂ ಅಂಬೇಡ್ಕರ್ ಆರ್ಟ್ಸ್ ಆ್ಯಂಡ್ ಸಯನ್ಸ್ ಕಾಲೇಜಿನ ವಿದ್ಯಾರ್ಥಿಗಳು ಬಸ್ ಡೇ ಆಚರಿಸಿದ್ದರು. ಹಲವಾರು ಹಳೆ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗೆ ಈ ದಿನ ಆಚರಿಸಲು ಹುರಿದುಂಬಿಸುತ್ತಾರೆಂದು ಹೇಳಲಾಗಿದೆ. ಹಲವು ವಿದ್ಯಾರ್ಥಿಗಳು ಬಸ್ಸಿನ ಎದುರು ನಿಂತು ಫೋಟೋ ತೆಗೆದು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವುದೂ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News