ಲೋಕಸಭಾ ಸದಸ್ಯೆಯಾಗಿ ಸೋನಿಯಾ ಪ್ರಮಾಣ ವಚನ

Update: 2019-06-18 14:36 GMT

ಹೊಸದಿಲ್ಲಿ,ಜೂ.18: ರಾಯಬರೇಲಿಯಿಂದ ಪುನರಾಯ್ಕೆಗೊಂಡಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 17ನೇ ಲೋಕಸಭೆಯ ಸದಸ್ಯೆಯಾಗಿ ಮಂಗಳವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ ಸದಸ್ಯರು ಮೇಜುಗಳನ್ನು ಕುಟ್ಟಿ ಹರ್ಷ ವ್ಯಕ್ತಪಡಿಸಿದರೆ,ಹಿಂದಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಯ ಧ್ವನಿಗಳು ಬಿಜೆಪಿ ಆಸನಗಳ ಕಡೆಯಿಂದ ಕೇಳಿಬಂದವು.

ಸೋನಿಯಾರ ಬೆನ್ನಿಗೇ ಮಾಜಿ ಸಚಿವೆ ಮೇನಕಾ ಗಾಂಧಿ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದರು. ಈ ಸಂದರ್ಭ ಓರಗಿತ್ತಿಯರಿಬ್ಬರೂ ನಮಸ್ಕಾರಗಳೊಂದಿಗೆ ಪರಸ್ಪರರನ್ನು ಅಭಿನಂದಿಸಿದರು.

ಮೇನಕಾ ಉತ್ತರ ಪ್ರದೇಶದ ಸುಲ್ತಾನಪುರದಿಂದ ಆಯ್ಕೆಯಾಗಿದ್ದಾರೆ. ಪಿಲಿಭಿತ್‌ನಿಂದ ಆಯ್ಕೆಯಾಗಿರುವ ಅವರ ಪುತ್ರ ವರುಣ ಗಾಂಧಿ ಕೂಡ ಪ್ರಮಾಣ ವಚನವನ್ನು ಸ್ವೀಕರಿಸಿದರು.

17ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು,ಮೊದಲ ಎರಡು ದಿನಗಳು ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಮೀಸಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News