ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಿತ್ತಾಟ: ಯೋಗ ಮಾಡಲೆಂದು ಬಂದು ಮ್ಯಾಟ್ ಗಳನ್ನು ಕದ್ದೊಯ್ದರು!

Update: 2019-06-21 15:04 GMT

ಹೊಸದಿಲ್ಲಿ, ಜೂ.21: ಯೋಗ ದಿನಾಚರಣೆಯ ಅಂಗವಾಗಿ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಜನರು ಯೋಗಾಭ್ಯಾಸದ ನಂತರ ಮ್ಯಾಟ್ ಗಳನ್ನು ಕದ್ದೊಯ್ದಿದ್ದು, ಹೊಡೆದಾಡಿಕೊಂಡ ಘಟನೆ ನಡೆದಿದೆ.

ಕಾರ್ಯಕ್ರಮದ ನಿರ್ವಾಹಕರು ತಡೆಯುತ್ತಿದ್ದರೂ ಜನರು ಒಬ್ಬರಿಂದ ಇನ್ನೊಬ್ಬರು ಮ್ಯಾಟ್ ಗಳನ್ನು ಕಸಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಯೋಗ ಮ್ಯಾಟ್ ಗಳಿಗಾಗಿ ಕಿತ್ತಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News