ಗೋರಕ್ಷಣೆ ಹೆಸರಲ್ಲಿ ಪುಂಡಾಟಿಕೆಗೆ ಈ ರಾಜ್ಯದಲ್ಲಿ ಕಾದಿದೆ ಶಿಕ್ಷೆ

Update: 2019-06-27 03:35 GMT

ಭೋಪಾಲ್, ಜೂ.27: ಗೋ ಸಂರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸುವ ಸಂಬಂಧ ಮಸೂದೆ ಮಂಡಿಸಲು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಕಮಲ್‌ನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿ ಇರುವ ಗೋವಂಶ ವಧಾ ಪ್ರತಿಷೇಧ ಅಧಿನಿಯಮ(ಗೋಹತ್ಯೆ ನಿಷೇಧ ಕಾಯ್ದೆ)ಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಗೋ ಸಂರಕ್ಷಣೆ ಹೆಸರಿನಲ್ಲಿ ಹಿಂಸಾ ಕೃತ್ಯಗಳನ್ನು ನಡೆಸುವವರನ್ನು ಶಿಕ್ಷಿಸಲು ಉದ್ದೇಶಿತ ತಿದ್ದುಪಡಿ ಅವಕಾಶ ನೀಡಲಿದೆ. ಜುಲೈ 8ರಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಇದಾದಲ್ಲಿ, ಗೋಸಂರಕ್ಷಣೆ ಹೆಸರಿನಲ್ಲಿ ನಡೆಯುವ ಪುಂಡಾಟಿಕೆ ನಿಯಂತ್ರಿಸಲು ಕಾಯ್ದೆ ಜಾರಿಗೊಳಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

 ಗೋಸಂರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿದಲ್ಲಿ ಅಥವಾ ಆಸ್ತಿಪಾಸ್ತಿಗೆ ಹಾನಿ ಮಾಡಿದಲ್ಲಿ ಆರು ತಿಂಗಳಿನಿಂದ ಐದು ವರ್ಷಗಳ ವರೆಗೆ ಜೈಲುಶಿಕ್ಷೆ ವಿಧಿಸುವ ಪ್ರಸ್ತಾವವನ್ನು ಉದ್ದೇಶಿತ ತಿದ್ದುಪಡಿ ಹೊಂದಿದೆ ಎಂದು ತಿಳಿದುಬಂದಿದೆ.ಸದ್ಯ ಇಂಥ ಹಿಂಸಾಚಾರಗಳನ್ನು ಭಾರತೀಯ ದಂಡಸಂಹಿತೆ ಅಥವಾ ಅಪರಾಧ ಸಂಹಿತೆಯಡಿ ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News