ಭಾರತದ ಗೆಲುವಿನ ನಾಗಾಲೋಟಕ್ಕೆ ಇಂಗ್ಲೆಂಡ್ ಬ್ರೇಕ್

Update: 2019-06-30 18:20 GMT

ಬರ್ಮಿಂಗ್‌ಹ್ಯಾಮ್, ಜೂ.30: ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಕೊಡುಗೆಯ ಹೊರತಾಗಿಯೂ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ನ 38ನೇ ಲೀಗ್ ಪಂದ್ಯದಲ್ಲಿ 31 ರನ್‌ಗಳಿಂದ ಸೋಲುಂಡಿದೆ.

ಗೆಲ್ಲಲು 338 ರನ್ ಕಠಿಣ ಗುರಿ ಪಡೆದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.

 ಎಂಎಸ್ ಧೋನಿ ಔಟಾಗದೆ 42 ರನ್, ಜಾಧವ್ ಔಟಾಗದೆ 12 ಗಳಿಸಿದರು.

ಭಾರತ ಆರಂಭಿಕ ಆಟಗಾರ ರಾಹುಲ್‌ರನ್ನ ಶೂನ್ಯಕ್ಕೆ ಕಳೆದುಕೊಂಡಿತು. ರಾಹುಲ್ 9 ಎಸೆತ ಎದುರಿಸಿದರೂ ರನ್ ಖಾತೆ ತೆರೆಯದೆ ವೋಕ್ಸ್‌ಗೆ ರಿಟರ್ನ್ ಕ್ಯಾಚ್ ನೀಡಿದರು.

ರೋಹಿತ್ ಹಾಗೂ ಕೊಹ್ಲಿ 2ನೇ ವಿಕೆಟ್ ಜೊತೆಯಾಟದಲ್ಲಿ 138 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಕೊಹ್ಲಿ ಔಟಾದ ಬಳಿಕ ರಿಷಭ್ ಪಂತ್ ಜೊತೆಗೂಡಿದ ರೋಹಿತ್ 3ನೇ ವಿಕೆಟ್ ಜೊತೆಯಾಟದಲ್ಲಿ 52 ರನ್ ಸೇರಿಸಿದರು.

ರೋಹಿತ್ 106 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ವಿಶ್ವಕಪ್ ಟೂರ್ನಿಯಲ್ಲಿ 3ನೇ ಶತಕ ಪೂರೈಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ದಾಖಲಿಸಿದ 25ನೇ ಶತಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News