ತೆಲಂಗಾಣ: ಗೋದಾವರಿಗೆ ರೂ. 2,121 ವೆಚ್ಚದ ಅಣೆಕಟ್ಟು ಯೋಜನೆ

Update: 2019-06-30 18:49 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ. 30: ತೆಲಂಗಾಣದ ಜಯಶಂಕರ್ ಭೂಪಾಲಪಲ್ಲಿಯಲ್ಲಿ ಗೋದಾವರಿ ನದಿಗೆ 2,121 ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟು ಕಟ್ಟಲು ಕೇಂದ್ರದ ಹಸಿರು ಸಮಿತಿ ಅನುಮತಿ ನೀಡಿದೆ. ಪ್ರಸ್ತಾಪಿತ ಪಿ.ವಿ. ನರಸಿಂಹ ರಾವ್ ಕಾಂತನಪಲ್ಲಿ ಸುಜಲಾ ಶ್ರಾವಂತಿ ಯೋಜನೆಯು ಗೋದಾವರಿ ನದಿಗೆ 23 ಮೀಟರ್ ಎತ್ತರ ಹಾಗೂ 1132 ಮೀಟರ್ ಉದ್ದದ ಅಣೆಕಟ್ಟು ಕಟ್ಟುವ ಹಾಗೂ ಮೂರು ಜಿಲ್ಲೆಗಳಾದ ಜಯಶಂಕರ್ ಭೂಪಾಲಪಲ್ಲಿ, ನಲಗೊಂಡ, ಖಮ್ಮಮ್‌ಗೆ ರಾಬಿ ಋತುಮಾನದಲ್ಲಿ ನೀರಾವರಿ ಒದಗಿಸುವ ಪ್ರಸ್ತಾಪವನ್ನು ಹೊಂದಿದೆ. ಯೋಜನೆಯ ಮೌಲ್ಯಮಾಪನ ನಡೆಸಲು ಹಾಗೂ ಕೇಂದ್ರ ಪರಿಸರ ಸಚಿವಾಲಯ ನೀಡುವ ಅಂತಿಮ ಅನುಮತಿ ಆಧಾರದಲ್ಲಿ ಶಿಫಾರಸು ಮಾಡಲು ಕೇಂದ್ರ ಸರಕಾರ ತಜ್ಞರ ಅಂದಾಜು ಸಮಿತಿ (ಇಎಸಿ) ಎಂದು ಕರೆಯುವ ಹಸಿರು ಸಮಿತಿ ರೂಪಿಸಿತ್ತು. ಪಿ.ವಿ. ನರಸಿಂಹ ರಾವ್ ಕಾಂತನಪಲ್ಲಿ ಸುಜಲಾ ಶ್ರಾವಂತಿ ಯೋಜನೆಗೆ ಅನುಮತಿ ನೀಡುವಂತೆ ಕೋರಿ ತೆಲಂಗಾಣ ಸರಕಾರ 2018 ಡಿಸೆಂಬರ್‌ನಲ್ಲಿ ಮನವಿ ಸಲ್ಲಿಸಿತ್ತು. ಆದರೆ, ಇಎಸಿ ಹೆಚ್ಚುವರಿ ಮಾಹಿತಿ ಕೋರಿ ತನ್ನ ನಿರ್ಧಾರ ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News