ಬ್ಯಾಂಕಿಂಗ್ ವಂಚನೆ: ದೇಶದ 18 ನಗರಗಳ 50 ಸ್ಥಳಗಳಲ್ಲಿ ಸಿಬಿಐ ದಾಳಿ

Update: 2019-07-02 15:03 GMT

ಹೊಸದಿಲ್ಲಿ, ಜು. 2: ದೇಶಾದ್ಯಂತ ಬ್ಯಾಂಕಿಂಗ್ ಹಗರಣದೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಸಂಬಂಧಿಸಿ ಸಿಬಿಐ ಮಂಗಳವಾರ 18 ನಗರಗಳ 50 ಸ್ಥಳಗಳಿಗೆ ದಾಳಿ ನಡೆಸಿತು ಹಾಗೂ 14 ಪ್ರಕರಣಗಳನ್ನು ದಾಖಲಿಸಿಕೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ 12 ರಾಜ್ಯಗಳಲ್ಲಿರುವ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಪ್ರವರ್ತಕರು ಹಾಗೂ ನಿರ್ದೇಶಕರ ವಿರುದ್ಧ 18 ನಗರಗಳ 50 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು ಎಂದು ಅವರು ತಿಳಿಸಿದರು.

 ಬ್ಯಾಂಕ್ ವಂಚನೆ, ಹಗರಣ ಪ್ರಕರಣಕ್ಕೆ ಸಂಬಂಧಿಸಿ ದೇಶಾದ್ಯಂತ ಸಿಬಿಐ ಇಂದು ದಾಳಿ ನಡೆಸಿದೆ. 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 12 ನಗರಗಳ 50ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಿಧ ಕಂಪೆನಿಗಳು, ಉದ್ಯಮ, ಅದರ ಪ್ರವರ್ತಕರು, ನಿರ್ದೇಶಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಆರೋಪಿಗಳ ವಿರುದ್ಧ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News