ಪನ್ನೀರ್ ಸೆಲ್ವಂ, ಎಡಿಎಂಕೆಯ ಇತರ 10 ಶಾಸಕರ ಅನರ್ಹ ಕೋರಿ ಸಲ್ಲಿಸಿದ ಮನವಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Update: 2019-07-02 15:07 GMT

ಹೊಸದಿಲ್ಲಿ, ಜು. 2: ಮುಖ್ಯಮಂತ್ರಿ ಎಡಪಳ್ಳಿ ಪಳನಿಸ್ವಾಮಿ ನಡೆಸಿದ್ದ ವಿಶ್ವಾಸಮತ ನಿರ್ಣಯದ ವಿರುದ್ಧ ಮತ ಚಲಾಯಿಸಿದ ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಹಾಗೂ ಎಡಿಎಂಕೆಯ ಇತರ ಶಾಸಕರನ್ನು ಅನರ್ಹಗೊಳಿಸು ವಂತೆ ಕೋರಿ ಡಿಎಂಕೆ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

ಉಪ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಸಹಿತ 10 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಡಿಎಂಕೆ ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಒಳಗೊಂಡ ಪೀಠ ಹೇಳಿದೆ.

11 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ 2017ರಲ್ಲಿ ಡಿಎಂಕೆ ಸಲ್ಲಿಸಿದ ಮನವಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.

2017 ಫೆಬ್ರವರಿ 18ರಂದು ಎಡಪಳ್ಳಿ ಪಳನಿಸ್ವಾಮಿ ಬಹುಮತ ನಿರ್ಣಯ ಕೋರಿದ ಸಂದರ್ಭ, ಆಗ ಬಂಡಾಯ ಬಣದಲ್ಲಿ ಇದ್ದ ಪನ್ನೀರ್‌ಸೆಲ್ವಂ ಹಾಗೂ ಇತರ 10 ಮಂದಿ ಶಾಸಕರು ಅವರ ವಿರುದ್ಧ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News