ಬನಾರಸ್ ಹಿಂದೂ ವಿವಿಯಲ್ಲಿ ದಲಿತ ವಿದ್ಯಾರ್ಥಿನಿ ಶೌಚಾಲಯ ಪ್ರವೇಶಿಸದಂತೆ ತಡೆ: ಆರೋಪ

Update: 2019-07-14 08:37 GMT

ಹೊಸದಿಲ್ಲಿ, ಜು.14: ತಾನು ದಲಿತ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕೆ ಕ್ಯಾಂಪಸ್ ನ ಶೌಚಾಲಯ ಪ್ರವೇಶಿಸುವುದಕ್ಕೆ ಭದ್ರತಾ ಸಿಬ್ಬಂದಿ ತನ್ನನ್ನು ತಡೆದಿದ್ದಾರೆ ಎಂದು ಬನಾರಸ್ ಹಿಂದೂ ವಿವಿಯ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ.

ಕಲಾ ವಿಭಾಗದ ಈ ದಲಿತ ವಿದ್ಯಾರ್ಥಿನಿ ಬನಾರಸ್ ಹಿಂದೂ ವಿವಿಯ ಎಸ್ಸಿ/ಎಸ್ಟಿ ವಿದ್ಯಾರ್ಥಿ ಘಟಕದ ಸಕ್ರಿಯ ಸದಸ್ಯೆಯಾಗಿದ್ದಾರೆ. ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ತಾನು ಕಳೆದ 5 ದಿನಗಳಿಂದ ಮಹಿಳಾ ಮಹಾವಿದ್ಯಾಲಯ ಹೆಲ್ಪ್ ಡೆಸ್ಕ್ ನಲ್ಲಿದ್ದೆ. ಗುರುವಾರ ಮಹಿಳಾ ಮಹಾವಿದ್ಯಾಲಯ ಆವರಣದಲ್ಲಿರುವ ಶೌಚಾಲಯಕ್ಕೆ ತೆರಳಿದೆ. ಆದರೆ ಸಿಬ್ಬಂದಿ ತನ್ನನ್ನು ತಡೆದರು ಎಂದು ಆಕೆ ಆರೋಪಿಸಿದ್ದಾರೆ.

“ಅವರು ತಾರತಮ್ಯದಿಂದ ನಡೆದುಕೊಂಡರು. ಅವರ ನಡೆ ಅಮಾನವೀಯ ಮತ್ತು ಅಕ್ರಮ” ಎಂದು ತಾನು ಸಲ್ಲಿಸಿರುವ ದೂರಿನಲ್ಲಿ ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ತಾನು ವಿದ್ಯಾರ್ಥಿನಿಯನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದು, ಅವರೊಂದಿಗೆ ಮಾತನಾಡಿದ್ದೇನೆ ಎಂದು ವಿವಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News