×
Ad

ಬಿಜೆಪಿ ನಾಯಕನ ಮಾನನಷ್ಟ ಮೊಕದ್ದಮೆ: ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ ಜಾಮೀನು

Update: 2019-07-16 16:00 IST

ಹೊಸದಿಲ್ಲಿ:  ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ರಾಜಧಾನಿಯ ನ್ಯಾಯಾಲಯ ಇಂದು ಜಾಮೀನು ನೀಡಿದೆ.

ರೂಪಾಯಿ 10,000 ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಭದ್ರತೆ ಮೇಲೆ ಇಬ್ಬರಿಗೂ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಸಮರ್ ವಿಶಾಲ್ ಜಾಮೀನು ನೀಡಿದ್ದಾರೆ.

ದಿಲ್ಲಿ ಮುಖ್ಯಮಂತ್ರಿಯನ್ನು ಕೊಲ್ಲಲು ಯತ್ನ ನಡೆಸಿದ್ದಾರೆಂದು ತಮ್ಮ ಮೇಲೆ ಆರೋಪ ಹೊರಿಸಿ ಇಬ್ಬರು ಎಎಪಿ ನಾಯಕರೂ ತಮ್ಮ ಮಾನ ಹಾನಿಗೈದಿದ್ದಾರೆಂದು ಗುಪ್ತಾ ತಮ್ಮ ಅಪೀಲಿನಲ್ಲಿ  ದೂರಿದ್ದಾರೆ. ಇಬ್ಬರೂ ಹಲವಾರು ಟ್ವೀಟುಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ತಮ್ಮ ಮಾನ ನಷ್ಟವುಂಟು ಮಾಡಿದ್ದಾರೆ ಹಾಗೂ ಇದಕ್ಕಾಗಿ  ಕ್ಷಮೆಯನ್ನೂ ಯಾಚಿಸಿಲ್ಲ ಹಾಗೂ ಪಶ್ಚಾತ್ತಾಪವನ್ನೂ ಪಟ್ಟಿಲ್ಲ ಎಂದು ದಿಲ್ಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಪ್ತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News